ಪಾಕಿಸ್ತಾನ ಓಟಕ್ಕೆ ನ್ಯೂಜಿಲೆಂಡ್ ಕಡಿವಾಣ

kyle jamieson and azhar ali for web
Published on

ಕ್ರೈಸ್ಟ್‌ಚರ್ಚ್: ಅಜರ್ ಅಲಿ (93ರನ್, 172 ಎಸೆತ, 12 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನಡುವೆಯೂ ಕೈಲ್ ಜಮೈಸನ್ (69ಕ್ಕೆ 5) ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 297 ರನ್‌ಗಳಿಗೆ ಸರ್ವಪತನ ಕಂಡಿತು. ಹೆಗ್ಲೆ ಓವೆಲ್ ಮೈದಾನದಲ್ಲಿ ಭಾನುವಾರ ಆರಂಭಗೊಂಡ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಾಕಿಸ್ತಾನ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಸರ್ವಪತನ ಕಂಡಿತು.

ಅನುಭವಿ ವೇಗದ ಬೌಲರ್ ಟಿಮ್ ಸೌಥಿ (61ಕ್ಕೆ 2) ಆರಂಭದಲ್ಲೇ ಶಾನ್ ಮಸೂದ್ (0) ವಿಕೆಟ್ ಕಬಳಿಸುವ ಮೂಲಕ ಶಾಕ್ ನೀಡಿದರು. ಬಳಿಕ ಅಬಿದ್ ಅಲಿ (25) ಹಾಗೂ ಅಜರ್ ಅಲಿ ಜೋಡಿ 2ನೇ ವಿಕೆಟ್‌ಗೆ 62 ರನ್ ಪೇರಿಸಿ ಚೇತರಿಕೆ ನೀಡಲು ಯತ್ನಿಸಿತು. ಕೈಲ್ ಜಮೈಸನ್ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದರು. ಅಜರ್ ಅಲಿ ಹಾಗೂ ಮೊಹಮದ್ ರಿಜ್ವಾನ್ (61) ಜೋಡಿ 5ನೇ ವಿಕೆಟ್‌ಗೆ 88 ರನ್ ಕಲೆಹಾಕಿದರೆ, 6ನೇ ವಿಕೆಟ್‌ಗೆ ಅಜರ್ ಅಲಿ ಹಾಗೂ ಹೀಮ್ ಅಶ್ರ್ (48) ಜೋಡಿ 56 ರನ್ ಜತೆಯಾಟವಾಡಿತು.

ಪಾಕಿಸ್ತಾನ: 83.5 ಓವರ್‌ಗಳಲ್ಲಿ 297 (ಅಬಿದ್ ಅಲಿ 25, ಅಜರ್ ಅಲಿ 93, ಮೊಹಮದ್ ರಿಜ್ವಾನ್ 61, ಹೀಮ್ ಅಶ್ರ್ಾ 48, ಜರ್ ಗೊಹರ್ 34, ಕೈಲ್ ಜಮೈಸನ್ 69ಕ್ಕೆ 5, ಟ್ರೆಂಟ್ ಬೌಲ್ಟ್ 82ಕ್ಕೆ 2, ಟಿಮ್ ಸೌಥಿ 61ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net