ಗಾಯದಿಂದ ಬವುಮಾ ಔಟ್; ವಿದಾಯ ಟೆಸ್ಟ್​ನಲ್ಲಿ ಡೀನ್​ ಎಲ್ಗರ್​ಗೆ ನಾಯಕತ್ವ ಹೊಣೆ

elgar web
Published on

ಕೇಪ್​ಟೌನ್: ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಸ್ನಾಯು ಸೆಳೆತದ ಸಮಸ್ಯೆಯಿಂದ ಭಾರತ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ಡೀಲ್​ ಎಲ್ಗರ್​ ವೃತ್ತೀಜಿವನದ ಕೊನೇ ಟೆಸ್ಟ್​ನಲ್ಲಿ ಹಂಗಾಮಿ ನಾಯಕರಾಗಿ ಆಡುವ ಅವಕಾಶ ಪಡೆದಿದ್ದಾರೆ. ಇದು ತನ್ನ ಕೊನೇ ಸರಣಿ ಎಂದು ಎಲ್ಗರ್​ ಈಗಾಗಲೆ ಘೋಷಿಸಿದ್ದರು.

ಮೊದಲ ಟೆಸ್ಟ್​ನಲ್ಲಿ ಬವುಮಾ ಮೊದಲ ದಿನವೇ ಗಾಯಗೊಂಡು ಮೈದಾನದಿಂದ ನಿರ್ಗಮಿಸಿದ್ದರು. ನಂತರದಲ್ಲಿ ಎಲ್ಗರ್​ ಅವರೇ ತಂಡವನ್ನು ಮುನ್ನಡೆಸಿದ್ದರು. 185 ರನ್​ ಸಿಡಿಸಿದ್ದ ಎಲ್ಗರ್​ ಮೊದಲ ಟೆಸ್ಟ್​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಬವುಮಾ ಸ್ಥಾನದಲ್ಲಿ ಜುಬೆರ್​ ಹಂಜಾರನ್ನು ತಂಡಕ್ಕೆ ಸೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net