

ಮಾಸ್ಕೋ: ಆಸ್ಟ್ರೇಲಿಯಾದ ಸ್ಟಾರ್ ಸ್ಕೇಟಿಂಗ್ ಪಟು, 2018ರ ವಿಂಟರ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಅಲೆಕ್ಸಾಂಡ್ರೊವಾಸ್ಕಾಯಾ ದುರಂತ ಅಂತ್ಯಕಂಡಿದ್ದಾರೆ. ರಷ್ಯಾ ವೆಬ್ಸೈಟ್ ವರದಿಯಂತೆ, 2 ಬಾರಿ ಆಸ್ಟ್ರೇಲಿಯ ಚಾಂಪಿಯನ್ 20 ವರ್ಷದ ಅಲೆಕ್ಸಾಂಡ್ರೊವಾಸ್ಕಾಯಾ, ಕಿಟಕಿಯಿಂದ ಹೊರಬಿದ್ದು ಸಾವನ್ನಪ್ಪಿದ್ದಾರೆ. 23 ವರ್ಷ ಪಾರ್ಟನರ್ ಹಾರ್ಲೆ ವಿಂಡ್ಸೊರ್ ಜತೆಗೂಡಿ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. 10 ವರ್ಷ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಮೊದಲ ಆಸ್ಟ್ರೇಲಿಯ ಸ್ಕೇಟಿಂಗ್ ಜೋಡಿ ಎನಿಸಿಕೊಂಡಿತು. 2018ರ ಪೆಯಾಂಗ್ ಚಾಂಗ್ ಕೂಟದಲ್ಲಿ ಈ ಜೋಡಿ ಶಾರ್ಟ್ ಪ್ರೋಗ್ರಾಂನಲ್ಲಿ 18ನೇ ಸ್ಥಾನಗಳಿಸಿತ್ತು. ಇದರೊಂದಿಗೆ ಅಗ್ರ 16 ಫ್ರೀ ಸ್ಟೇಕ್ ಹಂತಕ್ಕೇರಲು ವಿಫಲವಾಗಿತ್ತು.