ಎಬಿ ಡಿವಿಲಿಯರ್ಸ್​ ಸವಾಲು ಸ್ವೀಕರಿಸಿ ಪ್ಲೆಸಿಸ್​ ನೀಡಿದ ದೇಣಿಗೆ ಏನು ಗೊತ್ತೆ..?

faf du flesis for web
Published on

ಜೊಹಾನ್ಸ್ ಬರ್ಗ್: ಕೋವಿಡ್​-19ರ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಜನ ಸಾಮಾನ್ಯರ ಪಾಡಂತು ಹೇಳತೀರದು. ಬಡ ಜನರಿಗೆ ಹಲವು ಸಂಘ-ಸಂಸ್ಥೆಗಳು, ಸಿರಿವಂತರು ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಮಾತ್ರ ಎಲ್ಲರಿಗೂ ವಿಭಿನ್ನ. ದುರ್ಬಲ ಮಕ್ಕಳಿಗಾಗಿ ಒಬ್ಬರಿಗೊಬ್ಬರು ಸವಾಲು ನೀಡುವ ಮೂಲಕ ಹಣ ಸಂಗ್ರಹಿಸಿದ್ದಾರೆ. ಮಾಜಿ ಸಹಪಾಠಿ ಎಬಿ ಡಿವಿಲಿಯರ್ಸ್​ ನೀಡಿದ ಸವಾಲು ಸ್ವೀಕರಿಸಿದ ಸ್ಟಾರ್​ ಬ್ಯಾಟ್ಸ್​ಮನ್​ ಫಾಫ್ ಡು ಪ್ಲೆಸಿಸ್​, ಕೆಲವೊಂದು ಕ್ರಿಕೆಟ್​ ಪರಿಕರಗಳನ್ನು ಹರಾಜಿಗಿಡುವ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ.

ಕೋವಿಡ್​-19ರ ಮಹಾಮಾರಿಯಿಂದ ನರಳುತ್ತಿರುವ ಬಡಮಕ್ಕಳ ನೆರವಿಗೆ ದ.ಆಫ್ರಿಕಾ ಕ್ರಿಕೆಟಿಗರು ಮುಂದೆ ಬಂದಿದ್ದಾರೆ. ಪ್ಲೆಸಿಸ್, ಒಂದು ಬ್ಯಾಟ್​, ಪಿಂಕ್​ ಏಕದಿನ ಜೆರ್ಸಿ, ಹೊಸ ಐಎಕ್ಸ್​ಯೂ ಬ್ಯಾಟ್​ವೊಂದನ್ನು ದಾನ ಮಾಡಿದ್ದಾರೆ. ಬಡ ಮಕ್ಕಳಿಗೆ ದಾನ ನೀಡುವಂತೆ ಎಬಿ ಡಿವಿಲಿಯರ್ಸ್​, ಪ್ಲೆಸಿಸ್​ಗೆ ಸವಾಲು ಹಾಕಿದ್ದರು. ಎಲ್ಲರಿಗೂ ಗೊತ್ತಿರುವಂತೆ, ಕೋವಿಡ್​-19ರ ಎಲ್ಲರನ್ನೂ ಕಾಡುತ್ತಿದೆ. ನನಗೆ ನೀಡಿರುವ ಸವಾಲು ಸ್ವೀಕರಿಸಿರುವೆ, 2016ರಲ್ಲಿ ಇಂಗ್ಲೆಂಡ್​ ಎದುರು ಆಡಿದ ಪಿಂಕ್​ ಏಕದಿನ ಪಂದ್ಯದ ಜೆರ್ಸಿ, ಹೊಸ ಬ್ಯಾಟ್​ವೊಂದನ್ನು ನೀಡಿರುವೆ ಎಂದು ಪ್ಲೆಸಿಸ್​ ಹೇಳಿಕೊಂಡಿದ್ದಾರೆ.

ಪ್ಲೆಸಿಸ್​ ಇದಕ್ಕೂ ಮೊದಲು ಹಲವು ಬಾರಿ ಚಾರಿಟಿ ಕೆಲಸಗಳಲ್ಲಿ ತೊಡಗಿದ್ದಾರೆ. 36 ವರ್ಷದ ಪ್ಲೆಸಿಸ್​, ಪತ್ನಿ ಇಮ್ರಾರಿ ವಿಸ್ಸೆರ್​ ತಮ್ಮ ಚಾರಿಟಿ ವತಿಯಿಂದ ದಕ್ಷಿಣ ಆಫ್ರಿಕಾದ 35 ಸಾವಿರ ಮಕ್ಕಳಿಗೆ ಸಹಾಯ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net