ಆರ್​ಸಿಬಿ ನಾಯಕ ಪ್ಲೆಸಿಸ್​ಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುವಾಸೆ; ಟಿ20 ವಿಶ್ವಕಪ್​ಗೆ ವಾಪಸ್ ​ಸಾಧ್ಯತೆ

plessis web
Published on

ಅಬುಧಾಬಿ: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್​, ಮುಂದಿನ ವರ್ಷದ ಜೂನ್​ನಲ್ಲಿ ಟಿ20 ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪುನರಾಗಮನ ಕಾಣುವ ಸುಳಿವು ನೀಡಿದ್ದಾರೆ.

3 ವರ್ಷಗಳ ಹಿಂದೆ 2020ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಪರ ಟಿ20 ಪಂದ್ಯ ಆಡಿರುವ ಪ್ಲೆಸಿಸ್​, 2021ರ ಫೆಬ್ರವರಿಯಲ್ಲಿ ಪಾಕ್​ ವಿರುದ್ಧ ಟೆಸ್ಟ್​ ಆಡಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು.

ಅಬುಧಾಬಿ ಟಿ10 ಲೀಗ್​ನಲ್ಲಿ ಆಡುತ್ತಿರುವ ನಡುವೆ ಮಾಧ್ಯಮದೊಂದಿಗೆ ಮಾತನಾಡಿರುವ 39 ವರ್ಷದ ಪ್ಲೆಸಿಸ್​, ದಕ್ಷಿಣ ಆಫ್ರಿಕಾ ಸೀಮಿತ ಓವರ್​ ತಂಡದ ಕೋಚ್​ ಬಾಬ್​ ವಾಲ್ಟರ್​ ಜತೆ ಕಳೆದೆರಡು ವರ್ಷಗಳಿಂದ ಚರ್ಚಿಸುತ್ತಿರುವೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ನಂಬಿಕೆ ಹೊಂದಿದ್ದೇನೆ ಎಂದಿದ್ದಾರೆ. ಪ್ಲೆಸಿಸ್​ ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ 14 ಪಂದ್ಯಗಳಲ್ಲಿ 730 ರನ್​ ಬಾರಿಸಿ ಮಿಂಚಿದ್ದರು. ಅವರು 2014, 2016ರ ಟಿ20 ವಿಶ್ವಕಪ್​ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net