

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್(Dravid) ಕಾರಿಗೆ ಗೂಡ್ಸ್ ಆಟೋವೊಂದು ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಈ ಹಿನ್ನೆಲೆ ಗೂಡ್ಸ್ ಆಟೋದ ಡಿಕ್ಕಿ ಆಗಿದ್ದರಿಂದ ಕಾರಿನಿಂದ ಹೊರಬಂದ ಡ್ರಾವಿಡ್ ತಮ್ಮ ಕಾರ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಟೋ ಚಾಲಕನ ಜತೆ ದ್ರಾವಿಡ್ ಸಣ್ಣದಾಗಿ ವಾಗ್ವಾದ ಮಾಡಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಈ ಕುರಿತು ಯಾವುದೇ ಪ್ರಕರಂಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.
ತುಂಬಾ ಟ್ರಾಫಿಕ್ ವೇಳೆ ಘಟನೆ ನಡೆದಿದ್ದು, ಡ್ರಾವಿಡ್ ಅವರದ್ದು ತಪ್ಪೋ ಅಥವಾ ಆಟೋ ಚಾಲಕನದ್ದು ತಪ್ಪೋ ಎಂಬುವುದು ಸ್ಪಷ್ಟತೆ ಇಲ್ಲ. ಕೆಳಗಿಳಿದು ಕಾರ್ ಪರಿಶೀಲಿಸಿದ ನಂತರ ದ್ರಾವಿಡ್ ಆಟೋ ಚಾಲಕನ ಫೋನ್ ನಂ ಪಡೆದು ತೆರಳಿದ್ದಾರೆ ಎನ್ನಲಾಗಿದೆ.
#INDVsEngODI #BigShock #