ಬೂಮ್ರನನ್ನು ನಿವೃತ್ತಿಯತ್ತ ತಳ್ಳಬೇಡಿ: ಟೀಕಕಾರರಿಗೆ ಮಾಜಿ ಕ್ರಿಕೆಟಿಗ ಹೇಳಿದ್ದೇನು?| Jasprit Bumrah

Jasprit Bumrah
Published on

Jasprit Bumrah: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಭವಿಷ್ಯದಲ್ಲಿ ತಮ್ಮ ಪಂದ್ಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಹೇಳಿದ್ದಾರೆ.

ಈ ಕುರಿತು ತಮ್ಮ ಯೂಟ್ಯೂಬ್‌ನಲ್ಲಿ ವಿಶ್ಲೇಷಣೆಯ ಸಮಯದಲ್ಲಿ ಮಾತನಾಡಿದ ಚೋಪ್ರಾ, ನಾನು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ಸಂಜಯ್ ಮಂಜ್ರೇಕರ್ ಲೇಖನವನ್ನೂ ಓದುತ್ತಿದ್ದೆ. ಬುಮ್ರಾಗೆ ತಂಡ ಹೊಂದಿಕೊಳ್ಳಬಾರದು, ಬದಲಾಗಿ ಬುಮ್ರಾ ತಂಡಕ್ಕೆ ಹೊಂದಿಕೊಳ್ಳಬೇಕು ಎಂದು ಬರೆದಿದ್ದರು. ಬೂಮ್ರ ಏನು ಮಾಡಬೇಕು ಎಂಬುದರ ಕುರಿತು ಸಾಕಷ್ಟು ಅಭಿಪ್ರಾಯಗಳಿವೆ ಎಂದು ನನಗೆ ತಿಳಿದಿದೆ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ಬೂಮ್ರ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಆಡುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಚೋಪ್ರಾ ಹೇಳಿದರು.

ಬೂಮ್ರ ಪಂದ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ಸರಿಯೋ ತಪ್ಪೋ, ಅದು ನೈತಿಕ ಚರ್ಚೆಯಲ್ಲ ಎಂದು ನಾನು ಭಾವಿಸುತ್ತೇನೆ. ಎಲ್ಲ ಪಂದ್ಯಗಳಿಗೆ ಆಟಗಾರ ಲಭ್ಯವಿದ್ದರೆ, ಅವರನ್ನು ಸಾಧ್ಯವಾದಾಗಲೆಲ್ಲಾ ಆಡಿಸಿ ಎಂದು ಚೋಪ್ರಾ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬುಮ್ರಾ ಬ್ಯಾಟ್ಸ್‌ಮನ್ ಆಗಿದ್ದರೆ ಅವರ ಆಯ್ಕೆ ಮತ್ತು ಆಯ್ಕೆ ನೀತಿಯು ಸಮಸ್ಯೆಯಾಗುತ್ತಿತ್ತು ಎಂದು ಚೋಪ್ರಾ ಹೇಳಿದರು. ಸದಾ ಎಲ್ಲರೂ ಅವರನ್ನು ಟೀಕೆ ಮಾಡಿ ನಿವೃತ್ತಿಗೆ ತಳ್ಳಬೇಡಿ ಎಂದು ತಿಳಿಸಿದ್ದಾರೆ.

ವಿಶ್ವ ಕ್ರಿಕೆಟ್​ನಲ್ಲಿ ಬುಮ್ರಾನಂತ ಬೌಲರ್ ಯಾರೂ ಇಲ್ಲ. ಬೂಮ್ರ 24 ಕ್ಯಾರೆಟ್ ಶುದ್ಧ ಚಿನ್ನ ಎಂಬ ಕಾರಣಕ್ಕೆ ಅವರನ್ನು ಬಲವಂತವಾಗಿ ನಿವೃತ್ತಿಯತ್ತ ತಳ್ಳಬೇಡಿ. ಬೂಮ್ರ ಕೊಹಿನೂರ್ ವಜ್ರ. ಅವರು ಹೆಚ್ಚು ಸಮಯ ಆಡುತ್ತಾರೆ. ಆದರೆ, ಹೆಚ್ಚು ಟೆಸ್ಟ್ ಕ್ರಿಕೆಟ್ ಆಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅಲ್ಲದೆ, ಅವರು ಎಷ್ಟು ಸಮಯ ಆಡುತ್ತಾರೋ ಆಷ್ಟು ಸಮಯ ಅವರನ್ನು ಬಳಸಿಕೊಳ್ಳಿ ಎಂದು ಆಕಾಶ್​ ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net