ಪ್ರಧಾನಿ ಮೋದಿ ಒಬ್ಬ ಕಳ್ಳ ಮತ್ತು ಆ ಕಳ್ಳನನ್ನು ಅಧಿಕಾರದಿಂದ ತೆಗೆದುಹಾಕುವುದು ಅವಶ್ಯಕ: ಮಲ್ಲಿಕಾರ್ಜುನ್ ಖರ್ಗೆ| Mallikarjun Kharge

Mallikarjun Kharge
Published on

Mallikarjun Kharge: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಸಮಯದಲ್ಲಿ ಮಾಡಿದ ಭಾಷಣದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ (ಆಗಸ್ಟ್​,17) ತೀವ್ರ ವಾಗ್ದಾಳಿ ನಡೆಸಿದ್ದಾರೆ.ಅಲ್ಲದೆ, ಅಧಿಕಾರದಿಂದ ತೆಗೆದುಹಾಕಬೇಕಾದ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಕರೆದಿದ್ದಾರೆ.

ಬಿಹಾರದ ಸಸಾರಾಮ್‌ನಲ್ಲಿ ನಡೆದ ವಿರೋಧ ಪಕ್ಷದ ಱಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಶುಕ್ರವಾರ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯು ಆರ್‌ಎಸ್‌ಎಸ್ ಅನ್ನು ಹೊಗಳಿದ್ದಕ್ಕಾಗಿ ವಾಗ್ದಾಳಿ ನಡೆಸಿದರು. ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕದ ಹೊರತು, ಜನರ ಮತಗಳು, ಹಕ್ಕುಗಳು ಮತ್ತು ಸ್ವಾತಂತ್ರ್ಯ ಸುರಕ್ಷಿತವಾಗಿಲ್ಲ ಎಂದು ಖರ್ಗೆ ಹೇಳಿದರು.

ಮುಂದುವರೆದು ಮಾತನಾಡಿದ ಖರ್ಗೆ, RSSನವರು ಯಾರೂ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜೈಲಿಗೆ ಹೋಗಿಲ್ಲ. RSSನಲ್ಲಿದ್ದ ಜನರು ಬ್ರಿಟಿಷ್ ಸರ್ಕಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. RSS ಕಾರ್ಯಕರ್ತರು ಬ್ರಿಟಿಷರೊಂದಿಗೆ ಇರುವುದಾಗಿ ಹೇಳುತ್ತಿದ್ದರು. ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಅಂತಹ ಜನರ ಹೆಸರುಗಳನ್ನು ಹೇಳುತ್ತಿದ್ದರೇ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಆತ್ಮಗಳು, ಇಂದು ಏನು ಹೇಳುತ್ತಿರಬಹುದು? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ನಿಮ್ಮ ಮತಗಳನ್ನು, ಯುವಕರ ಉದ್ಯೋಗಗಳನ್ನು, ರೈತರ ಕನಿಷ್ಠ ಬೆಂಬಲ ಬೆಲೆಯನ್ನು ಮತ್ತು ನಿಮ್ಮ ಹಕ್ಕುಗಳನ್ನು ಕದಿಯುತ್ತಾರೆ. ಮೋದಿ ಒಬ್ಬ ಕಳ್ಳ ಮತ್ತು ಆ ಕಳ್ಳನನ್ನು ಅಧಿಕಾರದಿಂದ ತೆಗೆದುಹಾಕುವುದು ಅವಶ್ಯಕ ಎಂದು ಮೋದಿ ವಿರುದ್ಧ ಖರ್ಗೆ ಟೀಕಾಪ್ರಹಾರ ನಡೆಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net