ಭವಿಷ್ಯದಲ್ಲಿ ಭಾರತ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸಿ: ಬಿಸಿಸಿಐ ನಡೆಗೆ ಜಾವೇದ್ ಮಿಯಾಂದಾದ್ ಕೆಂಡಾಮಂಡಲ | India

ವಿಜಯವಾಣಿ - 2024-11-11T180641.347
Published on

ಲಾಹೋರ್​: 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಭಾರತ ಪಾಕಿಸ್ತಾನಕ್ಕೆ ಬರಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ನ ಒತ್ತಾಯ ಇದೀಗ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ರಾಷ್ಟ್ರದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯುವ 50 ಓವರ್‌ಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವಿಶ್ವದ ಟಾಪ್ ಎಂಟು ತಂಡಗಳು ಸ್ಪರ್ಧಿಸಲು ಸಜ್ಜಾಗಿದ್ದು, ಈ ಪೈಕಿ ಟೀಮ್ ಇಂಡಿಯಾ (India) ಪ್ರಬಲ ಸರ್ಧಿಯಾಗಿ ಗುರುತಿಸಿಕೊಂಡಿದೆ. ಪ್ರತ್ಯೇಕವಾಗಿ ತಮ್ಮ ಪಂದ್ಯಗಳನ್ನು ದುಬೈಗೆ ವರ್ಗಾಯಿಸಿದರೆ ಮಾತ್ರ ನಾವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದೇವೆ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ. ಈ ನಡೆಯನ್ನು ಖಂಡಿಸಿರುವ ಪಾಕ್​ನ ಹಿರಿಯ ಕ್ರಿಕೆಟ್ ಕೋಚ್ ಜಾವೇದ್ ಮಿಯಾಂದಾದ್, ಬಿಸಿಸಿಐ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಯಾವುದೇ ಬೆದರಿಕೆ ಇರುವುದಿಲ್ಲ

“ಪರಿಸ್ಥಿತಿ ಈ ಹಂತಕ್ಕೆ ತಲುಪಿರುವುದು ನಿಜಕ್ಕೂ ಹಾಸ್ಯಸ್ಪದ. ನಾವು ಭಾರತದ ವಿರುದ್ಧ ಆಡದಿದ್ದರೆ, ನಾವು ಈ ಹಿಂದೆ ತೋರಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಉಳಿಯುವುದಲ್ಲದೆ, ಏಳಿಗೆಯೂ ಆಗುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಪಂದ್ಯಗಳಿಲ್ಲದಿದ್ದಾಗ ಐಸಿಸಿ ಹೇಗೆ ಹಣ ಗಳಿಸುತ್ತದೆ ಎಂಬುದನ್ನು ನಾವು ನೋಡಲು ಎದುರುನೋಡುತ್ತಿದ್ದೇವೆ. ಇತ್ತೀಚಿನ ಬೆಳವಣಿಯ ಬಗ್ಗೆ ಇಂಜಮಾಮ್-ಉಲ್-ಹಕ್ ಕೂಡ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಆಟಗಾರರು ಪಾಕಿಸ್ತಾನದಲ್ಲಿ ಯಾವುದೇ ಬೆದರಿಕೆಯನ್ನು ಎದುರಿಸುವುದಿಲ್ಲ ಮತ್ತು ಇಲ್ಲಿ ಅತ್ಯುತ್ತಮ ಆತಿಥ್ಯವನ್ನು ಪಡೆಯಲಿದ್ದಾರೆ. ಪಾಕ್​ ನೆಲಕ್ಕೆ ಬರುವುದರಿಂದ ಹಿಂದೆ ಉಳಿಯುವ ಮೂಲಕ ವಿಶ್ವ ಕ್ರಿಕೆಟ್‌ನ ದೊಡ್ಡ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ" ಎಂದರು.

ಭಾರತ ಸರ್ಕಾರವು ತನ್ನ ನೀತಿ ಬದಲಾಯಿಸಬೇಕು

ಸದ್ಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಮ್ಮ ನೆಲದಲ್ಲಿ ಬಂದು ಆಡಲು ನಿರಾಕರಿಸಿರುವುದಕ್ಕೆ ತೀವ್ರ ಕಿಡಿಕಾರಿರುವ ಪಾಕ್​ ಮಾಜಿ ಹಿರಿಯ ಆಟಗಾರರು ಪಿಸಿಬಿಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ. ಪಾಕಿಸ್ತಾನ ವರದಿಗಳ ಪ್ರಕಾರ, ಭಾರತ ಸರ್ಕಾರವು ತನ್ನ ನೀತಿಯನ್ನು ಬದಲಾಯಿಸುವವರೆಗೆ ಐಸಿಸಿ ಮತ್ತು ಬಹು ರಾಷ್ಟ್ರಗಳ ಈವೆಂಟ್‌ಗಳಲ್ಲಿ ಟೀಮ್ ಇಂಡಿಯಾ ವಿರುದ್ಧದ ಯಾವುದೇ ಪಂದ್ಯಗಳನ್ನು ಆಡದಿರಲು ಸರ್ಕಾರವು ಪಿಸಿಬಿಗೆ ಸೂಚನೆ ನೀಡುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net