ಐಪಿಎಲ್‌ಗೆ ಹೊಸ ತಂಡದ ಸೇರ್ಪಡೆ ಕಷ್ಟ! ಯಾಕೆ ಗೊತ್ತೇ?

ipl 2020 vivo
Published on

ನವದೆಹಲಿ: ಐಪಿಎಲ್ 13ನೇ ಆವೃತ್ತಿ ಅರಬ್ ರಾಷ್ಟ್ರದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಬಿಸಿಸಿಐ, ಒಂದು ಅಥವಾ ಎರಡು ಹೊಸ ತಂಡಗಳ ಸೇರ್ಪಡೆಗೊಳಿಸಲು ಬಯಸಿದೆ. ಕರೊನಾ ಹಾವಳಿಯಿಂದ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡಾಗ ಅನುಭವಿಸಿರುವ ಆರ್ಥಿಕ ನಷ್ಟವನ್ನು ಈ ರೀತಿಯಾಗಿ ತುಂಬಿಕೊಳ್ಳುವುದು ಬಿಸಿಸಿಐ ಗುರಿಯಾಗಿದೆ. ಆದರೆ ಐಪಿಎಲ್‌ಗೆ ಹೊಸ ತಂಡಗಳ ಸೇರ್ಪಡೆ ಅಷ್ಟು ಸುಲಭವಲ್ಲ. ಯಾಕೆ ಗೊತ್ತೇ?

ಹೊಸ ತಂಡದ ಸೇರ್ಪಡೆಗೆ ಬಿಸಿಸಿಐ ಕೆಲ ಅಡೆತಡೆಗಳನ್ನೂ ಹೊಂದಿದೆ. ಅವುಗಳೆಂದರೆ:

1. ಟೂರ್ನಿಯ ಆದಾಯ ಹಂಚಿಕೆ ಮಾದರಿಗೆ 2023ರವರೆಗೆ ಈಗಾಗಲೆ ಒಪ್ಪಂದವಾಗಿದ್ದು, ಹೊಸ ತಂಡದ ಸೇರ್ಪಡೆಯಿಂದ ಇದನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕೆ ಹಾಲಿ ತಂಡಗಳಿಂದ ವಿರೋಧ ವ್ಯಕ್ತವಾಗಬಹುದು.

2. ಮುಂದಿನ ಐಪಿಎಲ್ ಟೂರ್ನಿ 2021ರ ಮಾರ್ಚ್ ಕೊನೇ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಆರಂಭಗೊಳ್ಳಲಿದೆ. ಇದರಿಂದ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಿ ಹೊಸ ತಂಡದ ಸೇರ್ಪಡೆಗೆ ಹೆಚ್ಚಿನ ಸಮಯಾವಕಾಶವಿಲ್ಲ.

3. 9ನೇ ತಂಡದ ಸೇರ್ಪಡೆಯಿಂದ ಹಾಲಿ ಸ್ವರೂಪದ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆ 76ಕ್ಕೆ ಏರಲಿದೆ. 10ನೇ ತಂಡ ಸೇರಿದರೆ ಪಂದ್ಯಗಳ ಸಂಖ್ಯೆ 90ಕ್ಕೇರುತ್ತದೆ. ಇಷ್ಟು ಪಂದ್ಯಗಳನ್ನು ನಡೆಸುವಷ್ಟು ಅವಧಿ ಐಪಿಎಲ್‌ಗೆ ಲಭ್ಯವಾಗುವುದು ಕಷ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net