ಐಪಿಎಲ್​ನಲ್ಲಿ ಉಳಿದ ಪಂದ್ಯಗಳ ಆಯೋಜನೆಗೆ ಬಿಸಿಸಿಐನ ಪ್ಲ್ಯಾನ್​ ಬಿ ಹೇಗಿದೆ ಗೊತ್ತೇ?

web ipl 94
Published on

ಬೆಂಗಳೂರು: ಭಾರತ-ಪಾಕ್​ ಗಡಿಯ ಉದ್ವಿಗ್ನತೆಯಿಂದ ಐಪಿಎಲ್​ ಟೂರ್ನಿ ಸ್ಥಗಿತಗೊಳಿಸಿರುವ ಬಿಸಿಸಿಐ, ಟೂರ್ನಿಯ ಉಳಿದ ಪಂದ್ಯಗಳನ್ನು ದಕ್ಷಿಣ ಮತ್ತು ಪೂರ್ವ ಭಾರತದ ನಗರಗಳಲ್ಲಿ ಆಯೋಜಿಸುವ "ಪ್ಲ್ಯಾನ್​​ ಬಿ' ಕೂಡ ಸಿದ್ಧಪಡಿಸಿದೆ ಎನ್ನಲಾಗುತ್ತಿದೆ.

ಹಾಲಿ ಯುದ್ಧ ಭೀತಿಯ ನಡುವೆಯೂ ಗಡಿಯಿಂದ ಸಾಕಷ್ಟು ದೂರವಿರುವ ದಕ್ಷಿಣ ಮತ್ತು ಪೂರ್ವ ಭಾರತದ ನಗರಗಳು ಅತ್ಯಂತ ಸುರಕ್ಷಿತವೆನಿಸಿವೆ. ಈ ನಿಟ್ಟಿನಲ್ಲಿ ಚೆನ್ನೈ, ಬೆಂಗಳೂರು, ಹೈದರಾಬಾದ್​, ಕೋಲ್ಕತದಲ್ಲಿ ಜೈವಿಕ-ಭದ್ರತಾ ವಲಯ ನಿರ್ಮಿಸಿ ಉಳಿದ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಗಳಿವೆ.

ಬಿಸಿಸಿಐ ಮುಂದಿರುವ ಆಯ್ಕೆಗಳು

*ದಕ್ಷಿಣ, ಪೂರ್ವ ಭಾರತದ ನಗರಗಳಿಗೆ ಬಾಕಿ ಪಂದ್ಯಗಳ ಸ್ಥಳಾಂತರ.

*ಭದ್ರತಾ ಕಾರಣಗಳಿಂದಾಗಿ ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ.

*ಯುಎಇ ಅಥವಾ ಇಂಗ್ಲೆಂಡ್​ ಅಥವಾ ದ. ಆಫ್ರಿಕಾಕ್ಕೆ ಉಳಿದ ಪಂದ್ಯಗಳ ಸ್ಥಳಾಂತರ.

*ಏಷ್ಯಾಕಪ್​ ರದ್ದು ಸಾಧ್ಯತೆಯಿಂದ ಸೆಪ್ಟೆಂಬರ್​ನಲ್ಲಿ ಟೂರ್ನಿ ಮರುನಿಗದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net