RCB ಪರ ವಿರಾಟ್​ ಎಷ್ಟು ಬಾರಿ ಇನ್ನೊಬ್ಬರ ನಾಯಕತ್ವದಲ್ಲಿ ಆಡಿದ್ದಾರೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಲಿಸ್ಟ್​ | Captaincy

dk - 2025-02-14T160551.894
Published on

Captaincy:ಇಂಡಿಯನ್​ ಪ್ರೀಮಿಯರ್ ಲೀಗ್​ 2025ರ 18 ಆವೃತ್ತಿನ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಹೊಸ ಕ್ಯಾಪ್ಟನ್ ಆಗಿ ರಜತ್ ಪಾಟೀದಾರ್ ಅವರನ್ನ ಇದೀಗ ನೇಮಕ ಮಾಡಲಾಗಿದೆ. ಇಲ್ಲಿಯವರೆಗೂ RCB ಯಲ್ಲಿ ಯಾವ ಆಟಗಾರರ ನಾಯಕತ್ವದಡಿಯಲ್ಲಿ ವಿರಾಟ್​​ ಕೊಹ್ಲಿ ಆಡಿದ್ದಾರೆ ಎಂದಬುವುದು ನೋಡೋಣ..

ರಾಹುಲ್​ ಡ್ರಾವಿಡ್​: ಟೀಮ್​ ಇಂಡಿಯಾದ ದಂತಕತೆ ಮಾಜಿ ಆಟಗಾರ ಕನ್ನಡಿಗ ರಾಹುಲ್​ ಡ್ರಾವಿಡ್​ RCB ತಂಡದ ಮೊದಲ ನಾಯಕರಾಗಿದ್ದರು. ವಾಲ್ಸ್​(ಅಡ್ಡಗೋಡೆ) ನೇತೃತ್ವದಡಿಯಲ್ಲಿ ಕೊಹ್ಲಿ ಆಡಿದ್ದಾರೆ.

ಕೇವಿನ್​ ಪೀಟರ್ಸನ್​: ಇಂಗ್ಲೆಂಡ್​ನ ಮಾಜಿ ನಾಯಕ ಕೆವಿನ್​ ಪೀಟರ್ಸನ್​ ಆರ್​ಸಿಬಿ ಎರಡನೇ ನಾಯಕರಾಗಿದ್ದರು. ಕೇವಿನ್​ ಆರ್​ಸಿಬಿಯ 6 ಪಂದ್ಯಗಳಿಗೆ ಮಾತ್ರ ಕ್ಯಾಪ್ಟನ್​ ಆಗಿದ್ದರು. ಇವರ ನಾಯಕತ್ವದಲ್ಲಿ ವಿರಾಟ್​ ಬ್ಯಾಟ್​ ಬೀಸಿದ್ದಾರೆ.

ಅನಿಲ್​ ಕುಂಬ್ಳೆ: ಟೀಮ್​ ಇಂಡಿಯಾದ ಮಾಜಿ ಲೆಜಂಡರಿ ಸ್ಪೀನ್ನರ್​ ಅನಿಲ್​ ಕುಂಬ್ಳೆ ವಿರಾಟ್​ಗೆ ಮೂರನೇ ನಾಯರಾಗಿದ್ದರು.

ಡೇನಿಯಲ್ ವೆಟ್ಟೋರಿ: ನ್ಯೂಜಿಲೆಂಡ್‌ನ ಮಾಜಿ ಅನುಭವಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿಗೆ ನಾಲ್ಕನೇ ನಾಯಕರಾದರು.

ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ 2021ರಲ್ಲಿ ಆರ್‌ಸಿಬಿ ತಂಡದ ನಾಯಕರಾದರು. 2021ರ ನಂತರ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿಯಲ್ಲಿ ಕೊಹ್ಲಿಗೆ ಐದನೇ ನಾಯಕರಾದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net