ಚಾಂಪಿಯನ್ಸ್​ ಟ್ರೋಫಿಗೆ ಅಚ್ಚರಿ ಬಹುಮಾನ ಘೋಷಿಸಿದ ICC: ಗೆದ್ದ ತಂಡಕ್ಕೆ ಸಿಗಲಿದೆ ಬಂಪರ್​!

dk - 2025-02-14T132125.974
Published on

ICC:ಇದೇ ಫೆ.19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್​​ ಟ್ರೋಫಿ ಪ್ರಶಸ್ತಿ ಗೆದ್ದ ಮತ್ತು ಪಂದ್ಯಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಗಳಿಗೆ ಬೃಹತ್​​ ಮೊತ್ತದ ಬಹುಮಾನವನ್ನು ಇದೀಗ ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ICC) ಘೋಷಣೆ ಮಾಡಿದೆ.

ಹೌದು, 2017ರ ಬಳಿಕ ಈ ಬಾರಿ ಚಾಂಪಿಯನ್​ ಟ್ರೋಫಿ ಆಯೋಜನೆ ಮಾಡಿದ್ದು, ಟ್ರೋಫಿ ಗೆದ್ದ ತಂಡ ಬರೊಬ್ಬರಿ 20 ಕೋಟಿ ರೂ. ಬಹುಮಾನ(2.24ಮಿಲಿಯನ್​) ಪಡೆಯಲಿದೆ ಎಂದು ಐಸಿಸಿ ಮೂಲಗಳಿಂದ ಖಚಿತವಾಗಿದೆ ಎಂದು ವರದಿಯಾಗಿದೆ.

ಅಲ್ಲದೆ, ಮಾರ್ಚ್​ 9 ರಂದು ಫೈನಲ್​ ಇದ್ದು, ಅಂದು ವಿಜೇತ ಟ್ರೋಫಿ ಜತೆ ಬಹುಮಾನ ವಿತರಣೆಯಾಗಲಿದೆ. ಇನ್ನು ರನ್ನರ್​ ಅಪ್​ ತಂಡಕ್ಕೆ 1.12 ಮಿಲಿಯನ್ ಬಹುಮಾನ​​(10.4 ಕೋಟಿ ರೂ.) ಸಿಗಲಿದೆ ಎಂದು ಖಚಿತವಾಗಿದೆ. ಇದು 2017ರ ಟ್ರೋಫಿಗಿಂತ ಶೇ.53ರಷ್ಟು ಹೆಚ್ಚಳವಾಗಿದೆ. ಇದರ ಜತೆಗೆ 2025ರ ಚಾಂಪಿಯನ್​ ಟ್ರೋಫಿಯಲ್ಲಿ ಸ್ಪರ್ಧಿಸುವ ಎಲ್ಲಾ ತಂಡಗಳಿಗೆ ತಲಾ 12500 ಡಾಲರ್​ ಸಿಗಲಿದೆ.

ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಬಹುಮಾನ ಮೊತ್ತ ಇಲ್ಲದೆ...

ವಿಜೇತ - 20.8 ಕೋಟಿ ರೂ.

ರನ್ನರ್ ಅಪ್ - 10.4 ಕೋಟಿ ರೂ.

ಸೆಮಿಫೈನಲಿಸ್ಟ್‌ಗಳು - 5.2 ಕೋಟಿ ರೂ.

5ನೇ ಮತ್ತು 6ನೇ ಸ್ಥಾನಗಳು - 3 ಕೋಟಿ ರೂ.

7ನೇ ಮತ್ತು 8ನೇ ಸ್ಥಾನಗಳು - 1.2 ಕೋಟಿ ರೂ.

ಪ್ರತಿ ಪಂದ್ಯಕ್ಕೆ - 29 ಲಕ್ಷ ರೂ. ಬಹುಮಾನ ನಿಗದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net