ನಂಬಿಕೆ, ಭರವಸೆ ಇಲ್ಲದ ಮೇಲೆ ಕಣಕ್ಕಿಳಿಸುವುದೇಕೆ? ಗೌತಿ, ಗಿಲ್​ ನಿರ್ಧಾರಕ್ಕೆ ದಿನೇಶ್ ಕಾರ್ತಿಕ್​ ಕಿಡಿ | IND vs ENG

ವಿಜಯವಾಣಿ (99)
Published on

IND vs ENG Test: ಪ್ರಸಕ್ತ ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್​ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ ಹೆಡಿಂಗ್ಲಿಯಲ್ಲಿ​ ನಡೆಯುತ್ತಿದ್ದು, 4ನೇ ದಿನದ ಪಂದ್ಯದಲ್ಲಿ ಭಾರತ ಮುಂಚೂಣಿಯಲ್ಲಿದೆ. ತಂಡದ ಪರ ಮೂವರು ಸ್ಟಾರ್​ ಬ್ಯಾಟರ್​ಗಳಿಂದ ಮೂರು ಶತಕಗಳು ದಾಖಲಾಗಿದ್ದೇ ಆದರೂ ಒಂದಷ್ಟು ತಪ್ಪುಗಳು ಇಂಗ್ಲೆಂಡ್​ ಬ್ಯಾಟರ್​ಗಳ ಹೆಚ್ಚುವರಿ ರನ್​ ಕೊಡುಗೆಗೆ ಮರುಜೀವ ಕೊಟ್ಟಿದೆ. ಆಟಗಾರರ ಕುರಿತಂತೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್​, ಕೋಚ್​ ಮತ್ತು ಕ್ಯಾಪ್ಟನ್ ನಿರ್ಧಾರವನ್ನು ಟೀಕಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಆಲ್​ರೌಂಡರ್​ ಆಗಿ ಶಾರ್ದೂಲ್​ ಠಾಕೂರ್​ರನ್ನು ಕಣಕ್ಕಿಳಿಸಿದ ಕ್ಯಾಪ್ಟನ್​ ಶುಭಮನ್​ ಗಿಲ್​ ಮತ್ತು ಹೆಡ್​ ಕೋಚ್​ ಗೌತಮ್ ಗಂಭೀರ್ ಅವರ ನಿರ್ಧಾರವನ್ನು ಕಾರ್ತಿಕ್​ ಟೀಕಿಸಿದ್ದಾರೆ. "ಕ್ರೀಸ್​ಗೆ ಬಂದ ಶಾರ್ದೂಲ್​ ಹೆಚ್ಚು ಕಾಲ ನಿಲ್ಲದೆ ಹೋಗಿದ್ದು ಮತ್ತು ಮಾಡಿದ ಆರು ಓವರ್​ಗಳಲ್ಲಿ 38 ರನ್​ ಕೊಟ್ಟು ಒಂದೇ ಒಂದು ವಿಕೆಟ್​ ಪಡೆದಿಲ್ಲ. ಅವರನ್ನು ತಂಡದ ಪರ ಆಡಿಸಿದ ನಿರ್ಧಾರ ಎಷ್ಟು ಸರಿ ಎಂಬುದನ್ನು ಮ್ಯಾನೇಜ್​ಮೆಂಟ್​ ಒಮ್ಮೆ ಗಮನಿಸಬೇಕು. ಒಬ್ಬರ ಬೌಲಿಂಗ್ ಮೇಲೆ ನಂಬಿಕೆ, ಭರವಸೆ ಇಲ್ಲದೆ ಮೇಲೆ ಏಕೆ ಆಡಿಸಬೇಕು" ಎಂದು ಮ್ಯಾನೇಜ್​ಮೆಂಟ್​ಗೆ ಪ್ರಶ್ನಿಸಿದ್ದಾರೆ.

"ತಂಡಕ್ಕೆ ಠಾಕೂರ್​ರನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಜ. ಆದರೆ, ಅವರನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಮತ್ತು ನಂಬಿಕೆಯಿಡಲು ಏಕೆ ಇಷ್ಟೊಂದು ಹಿಂದೇಟು ಹಾಕುತ್ತಿದ್ದಾರೆ ಅನ್ನೋದು ತಿಳಿಯುತ್ತಿಲ್ಲ. ಉಳಿದೆಲ್ಲ ವೇಗಿಗಳು 20ಕ್ಕೂ ಅಧಿಕ ಓವರ್​ಗಳನ್ನು ಮಾಡಿದರೆ, ಶಾರ್ದೂಲ್​ ಕೇವಲ 6 ಓವರ್​ಗಳನ್ನು ಮಾಡಿದ್ದಾರೆ" ಎಂದು ಆಕಾಶ್​ ಚೋಪ್ರಾ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net