ದಂಡ ಬಿದ್ದರೂ ಕಲಿಯಲಿಲ್ಲ ಬುದ್ಧಿ! ಮತ್ತದೇ ಮಿಸ್ಟೇಕ್​... ವಿಕೆಟ್​ಗಿಂತ ದಂಡಗಳ ಸರದಾರನಾಗಿ ದಿಗ್ವೇಶ್ ರಥಿ ಮಿಂಚು | Digvesh Rathi

ವಿಜಯವಾಣಿ - 2025-04-08T200411.607
Published on

Digvesh Rathi: ಐಪಿಎಲ್​ 18ನೇ ಆವೃತ್ತಿ ಶುರುವಾದಗಿನಿಂದಲೂ ಕ್ರಿಕೆಟ್​ ಅಭಿಮಾನಿಗಳ ಉತ್ಸಾಹ, ಕುತೂಹಲಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಇದಕ್ಕೆ ಕಾರಣ, ಪ್ರತಿಯೊಂದು ಪಂದ್ಯ ಕೂಡ ರೋಚಕತೆಗೆ ಸಾಕ್ಷಿಯಾಗುತ್ತಿರುವುದು. ಒಂದೆಡೆ ಆಯಾ ಪಂದ್ಯಗಳಲ್ಲಿ ಗೆಲುವು-ಸೋಲು ಮೀರಿ ಕೆಲವೊಂದು ಘಟನೆಗಳು ನೋಡುಗರ ಹುಬ್ಬೇರಿಸುತ್ತಿದೆ. ಈ ಪೈಕಿ ಲಖನೌ ಸೂಪರ್ ಜೈಂಟ್ಸ್​ ವೇಗಿ ದಿಗ್ವೇಶ್ ರಥಿ ಮುಂಚೂಣಿ.

ಇತ್ತೀಚಿಗಿನ ಪಂದ್ಯದಲ್ಲಿ ದಂಡಕ್ಕೆ ತುತ್ತಾದ ಜಿಟಿ ವೇಗಿ ಇಶಾಂತ್ ಶರ್ಮ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪೆನಾಲ್ಟಿಗೆ ತುತ್ತಾದರು. ಇನ್ನೂ ಇಲ್ಲಿಯವರೆಗೂ ಸ್ಟಾರ್ ಆಟಗಾರರು ಭಾರೀ ದಂಡಕ್ಕೆ ಸಿಲುಕಿದ್ದಾರೆ. ಈ ಪಟ್ಟಿಯಲ್ಲಿ ಇಶಾಂತ್ ಜತೆಗೆ ಲಖನೌ ಸೂಪರ್ ಜೈಂಟ್ಸ್​ನ ವೇಗಿ ದಿಗ್ವೇಶ್ ರಥಿ, ಮುಂಬೈನ ಹಾರ್ದಿಕ್ ಪಾಂಡ್ಯ, ರಾಜಸ್ಥಾನ ರಾಯಲ್ಸ್​ನ ರಿಯಾನ್ ಪರಾಗ್ ಮತ್ತು ಎಲ್​ಎಸ್​ಜಿ ಕ್ಯಾಪ್ಟನ್​ ರಿಷಭ್ ಪಂತ್ ಸೇರಿದ್ದಾರೆ. ಆದ್ರೆ, ಪದೇ ಪದೇ ಅದೇ ತಪ್ಪನ್ನು ಮಾಡುತ್ತಿರುವ ರಥಿ, ಮೂರನೇ ಬಾರಿಗೆ ಬಿಸಿಸಿಐ ವಿಧಿಸುವ ಭಾರೀ ದಂಡಕ್ಕೆ ಗುರಿಯಾಗಲಿದ್ದಾರೆ.

ಇಂದು (ಏ.08) ನಡೆದ ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಲಖನೌ ಸೂಪರ್ ಜೈಂಟ್ಸ್​, 4 ರನ್​ಗಳ ಅಂತರದಲ್ಲಿ ಕೆಕೆಆರ್​ ಎದುರು ಗೆದ್ದು ಬೀಗಿತು. ಇನ್ನು ಈ ಪಂದ್ಯದಲ್ಲಿ ಸುನಿಲ್​ ನರೈನ್​ ಅವರ ವಿಕೆಟ್​ ಕಬಳಿಸಿದ ದಿಗ್ವೇಶ್ ರಥಿ, ವಿಕೆಟ್​ ಕಿತ್ತ ಖುಷಿಯಲ್ಲಿ ಹುಲ್ಲಿನ ಮೇಲೆ ಬರೆದು ಸಂಭ್ರಮಿಸಿದರು. ಈ ನಡೆ ಬಿಸಿಸಿಐ ಅನ್ನು ಮತ್ತೊಮ್ಮೆ ಕೆರಳಿಸಿದೆ. ಕಳೆದ ಬಾರಿಯೂ ಇದೇ ರೀತಿ ಸಂಭ್ರಮಿಸಿ, ಭಾರೀ ದಂಡಕ್ಕೆ ತುತ್ತಾಗಿದ್ದ ರಥಿ, ಇದೀಗ ಮೂರನೇ ಬಾರಿ ದಂಡ ಪಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಇವರ ಈ ರೀತಿಯ ವಿಚಿತ್ರ ಸಂಭ್ರಮಕ್ಕೆ ಕೊನೆಯೇ ಇಲ್ಲ ಎಂಬಂತೆ ಕಂಡುಬಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net