ರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೆಂಗಳೂರಿನ ಅಂಗವಿಕಲ ಬಾಲಕ ದಿಗಂತ್

New Project
Published on

ಬೆಂಗಳೂರು; ಅಂಗವೈಕಲ್ಯತೆ ಯಾವುದೇ ಸಾಧನೆಗೆ ಅಡ್ಡಿಯಲ್ಲ ಎಂಬ ಮಾತು ಆಗಾಗ ನಿಜವಾಗುತ್ತಲೇ ಇರುತ್ತದೆ. ಈ ಮಾತನ್ನು ನಿಜ ಮಾಡಿ ತೋರಿಸಿದ್ದಾನೆ ಬೆಂಗಳೂರಿನ ಅಂಗವಿಕಲ ಬಾಲಕ ದಿಗಂತ್ ವೈನತೇಯ. ಇತ್ತೀಚೆಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ಮಹಾದೇವ ಮೂರ್ತಿಯವರ ಪುತ್ರ 15 ವರ್ಷದ ದಿಗಂತ್ ವೈನತೇಯ 50 ಮೀಟರ್ ಮತ್ತು 100 ಮೀಟರ್ ಈಜು ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾನೆ.

ಜನ್ಮತಃ ಆರೋಗ್ಯವಂತನಾಗಿದ್ದ ದಿಗಂತ್ ತನ್ನ 4ನೇ ವಯಸ್ಸಿನಲ್ಲಿ ಅತಿಯಾದ ಜ್ವರಕ್ಕೆ ತುತ್ತಾಗಿ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಅಂಗವೈಕಲ್ಯವನ್ನು ಅನುಭವಿಸುತ್ತಿದ್ದಾನೆ. ಇಂದಿರಾನಗರದ ಸ್ಪ್ಯಾಸ್ಟಿಕ್ ಸೊಸೈಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅರ್ಜುನ ಪ್ರಶಸ್ತಿ ಪುರಸ್ಕೃತ ಶರತ್ ಗಾಯಕವಾಡ ಅವರ ಮಾರ್ಗದರ್ಶನದಲ್ಲಿ ಸ್ವಿಮ್ಮಿಂಗ್ ಅಭ್ಯಾಸ ಮಾಡುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net