ಐಪಿಎಲ್​ನಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಕೋಳಿ ಸಾಕಲು ಹೊರಟ ಧೋನಿ!

dhoni
Published on

ನವದೆಹಲಿ: ಈ ವರ್ಷದ ಐಪಿಎಲ್​ನಲ್ಲಿ ಎಂ.ಎಸ್​.ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಹೀನಾಯ ಸೋಲು ಕಂಡಿದೆ. ತಂಡದ ಸೋಲಿಗೆ ನಾಯಕ ಧೋನಿಯೇ ಕಾರಣ ಎಂದು ಕೆಲವರು ಹೀಯಾಳಿಸಲಾರಂಭಿಸಿದ್ದಾರೆ. ಅದೇ ಬೆನ್ನಲ್ಲಿ ಕೋಳಿ ಸಾಕಾಣಿಗೆ ಮಾಡಲು ಧೋನಿ ಮುಂದಾಗಿದ್ದಾರೆ.

ವಿಶೇಷ ಕೋಳಿ ತಳಿಯಾಗಿರುವ ಕಡಕ್ನಾಥ್​ ತಳಿಯ 2 ಸಾವಿರ ಮರಿಗಳ ಖರೀದಿಗೆ ಧೋನಿ ಮುಂದಾಗಿದ್ದಾರೆ. ಕ್ರಿಕೆಟ್​ ಇಲ್ಲದ ಸಮಯದಲ್ಲಿ ಕೋಳಿ ಸಾಕಾಣಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಕೋಳಿ ಮರಿಗಳು ಧೋನಿ ಕೈ ಸೇರಲಿವೆ ಎನ್ನುವ ವರದಿಯಿದೆ.

ಕೋಳಿ ಸಾಕಾಣಿಕೆಗೆ ಮುಂದಾಗಿರುವ ಧೋನಿ ಕಡಕ್ನಾಥ್​ ಕೋಳಿ ಸಂಶೋಧನ ಕೇಂದ್ರದ ನಿರ್ದೇಶಕರಾಗಿರುವ ಐಎಸ್​ ತೋಮರ್​ ಅವರನ್ನು ಸಂಪರ್ಕಿಸಿದ್ದಾರೆ. ಕೋಳಿ ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಕಡಕ್ನಾಥ್​ ಕೋಳಿಗಳು ದಪ್ಪವಾಗಿ ಬೆಳೆಯುತ್ತವೆ. ವಿಶೇಷವೆಂದರೆ ಈ ಕೋಳಿಗಳಲ್ಲಿ ಕೊಬ್ಬು ಇರುವುದಿಲ್ಲ. ನಾಲ್ಕು ತಿಂಗಳಲ್ಲಿ 1-1.8 ಕೆ.ಜಿವರೆಗೆ ಬೆಳೆಯುವ ಈ ಕೋಳಿಗಳು 1500-1800 ರೂಪಾಯಿಗೆ ಮಾರಾಟವಾಗುತ್ತವೆ. ಈ ಕೋಳಿಗಳು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net