

ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, 2019ರ ಏಕದಿನ ವಿಶ್ವಕಪ್ ಸೆಮಿೈನಲ್ ಪಂದ್ಯದ ಬಳಿಕ ಕ್ರಿಕೆಟ್‌ನಿಂದ ಸಂಪೂರ್ಣ ದೂರವೇ ಉಳಿದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಐಪಿಎಲ್‌ಗೆ ಸಜ್ಜಾಗಲು ಚೆನ್ನೈಗೆ ಬಂದಿದ್ದರೂ ಕರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್‌ಗೂ ಮುನ್ನವೇ ತವರಿಗೆ ವಾಪಸಾಗಿದ್ದರು. ತವರು ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲೇ ಲಾಕ್ ಆಗಿದ್ದಾರೆ. ಕಳೆದ ಮೂರು ತಿಂಗಳಿಂದಲೂ ಧೋನಿ ಫಾರ್ಮ್ ಹೌಸ್‌ನಲ್ಲೇ ಉಳಿದಿದ್ದಾರೆ. ಧೋನಿ ಪತ್ನಿ ಸಾಕ್ಷಿ ಸಿಂಗ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಜಾರ್ಖಂಡ್ ರಾಜಧಾನಿ ರಾಂಚಿಯ ಹೊರ ವಲಯದಲ್ಲಿರುವ ಫಾರ್ಮ್ ಹೌಸ್‌ನ ವರ್ಣರಂಜಿತ ವಿಡಿಯೋ ಹಾಗೂ ಕೆಲವೊಂದು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!