

ಗೋವಾ:2025ರ ಹೊಸ ವರ್ಷವನ್ನು(New Year) ಕ್ರಿಕೆಟಿಗ ಎಂ.ಎಸ್.ಧೋನಿ ಮತ್ತು ಪತ್ನಿ ಗೋವಾದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಬಳಿಕ ನಡೆದ ಪಾರ್ಟಿಯಲ್ಲಿ ಧೋನಿ ಮತ್ತು ಪತ್ನಿ ಸಾಕ್ಷಿ ಹೆಜ್ಜೆಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಜ.1ರ ಮಧ್ಯರಾತ್ರಿ ಚೈನೀಸ್ ಲ್ಯಾಂಟರ್ಸ್ ಹಚ್ಚಿ ಆಕಾಶದೆತ್ತರಕ್ಕೆ ಬಿಡುವ ಮೂಲಕ ಹೊಸ ವರ್ಷವನ್ನು ತಮ್ಮ ಗೆಳೆಯರೊಂದಿಗೆ ಧೋನಿ ಆಚರಿಸಿದರು. ಈ ಸಂತೋಷದ ಕ್ಷಣವನ್ನುಪತ್ನಿ ಸಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಶ್ಯುವಲ್ ಪ್ರಿಂಟೆಡ್ ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿರುವ ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾವೊಂದಿಗೆ ಪೋಸ್ ನೀಡುತ್ತಿರುವ ಫೋಟೊಗಳು ಸದ್ದು ಮಾಡುತ್ತಿವೆ. ಅಲ್ಲದೆ, ಪೋಟೋಗಳನ್ನು ಅಭಿಮಾನಿಗಳು ಹಂಚಿಕೊಂಡು ಸಂತೋಷಪಟ್ಟಿದ್ದಾರೆ.
ಸೋಮವಾರ ಸಂಜೆ ರಾಂಚಿ ವಿಮಾನ ನಿಲ್ದಾಣದಿಂದ ಗೋವಾಕ್ಕೆ ತೆರಳುತ್ತಿದ್ದ ಧೋನಿಯನ್ನು ಎಲ್ಲಿಗೆ ಹೊಗುತ್ತಿದ್ದಿರಿ ಧೋನಿ ಭಾಯ್ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಕೇಳುವ ಮೂಲಕ ತಮ್ಮ ಮೊಬೈಲ್ ಮೂಲಕ ರೇಕಾರ್ಡ್ ಮಾಡಿಕೊಂಡಿದ್ದರು. ಇದೀಗ ಧೋನಿ ಭಾಯ್ ಗೋವಾಗೆ ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಧೋನಿ, ಕುಟುಂಬಸ್ಥರ ಜತೆ ಕ್ರಿಸ್ಮಸ್ ಆಚರಿಸಿದ್ದರು. ಅಲ್ಲದೆ, ಸಂತಕ್ಲಾಸ್ ಬಟ್ಟೆಗಳನ್ನು ಹಾಕಿಕೊಂಡು ಸಂತೋಷಪಟ್ಟಿದ್ದರು. ಬ್ಯೂಸಿ ಶೆಡ್ಯೂಲ್ನಲ್ಲಿರುವ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಲ್ಲಿಂದ ಅಗ್ಗಾಗೆ ತಮ್ಮ ಕುಟುಂಬದ ಜತೆ ಸಮಯ ಮಿಸಲಿಟ್ಟಿರುವ ಮಹೇಂದ್ರ ಸಿಂಗ್ ಸಂತೋಷದ ಕ್ಷಣಗಳನ್ನು ಕಳೆಯುವ ಮೂಲಕ ಸುದ್ದಿಯಲ್ಲಿರುತ್ತಾರೆ.
ಕ್ರಿಕೆಟ್ ವಿಚಾರಕ್ಕೆ ಬರುವುದಾದರೆ ಚೈನ್ನೈ ಸೂಪರ್ ಕಿಂಗ್ ಪರ ಆಡುತ್ತಿರುವ ಧೋನಿ 2025ರಲ್ಲಿ ಮತ್ತೊಮ್ಮೆ ಟ್ರೋಫಿಯ ಕಮಾಲ್ ಮಾಡಿ ವಿದಾಯ ಹೇಳಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಆದರೆ,ಇದರ ಬಗ್ಗೆ ಧೋನಿಯಾಗಲಿ ಅಥವಾ ಬೈನ್ನೈ ಪ್ರಾಂಚೈಸಿ ಆಗಲಿ ಎಲ್ಲೂ ಮಾತನಾಡಿಲ್ಲ. (ಏಜೆನ್ಸೀಸ್).