2025ರ ಹೊಸ ವರ್ಷವನ್ನು ಸ್ವಾಗತಿಸುವ ಮೊದಲ ಮತ್ತು ಕೊನೆಯ ದೇಶ ಯಾವುದು ಗೊತ್ತೇ?

dk (80)
Published on

ನವದೆಹಲಿ: ಇದೀಗ ನಾವು 2024 ಕ್ಕೆ ವಿದಾಯ ಹೇಳುತ್ತೇವೆ ಮತ್ತು 2025 ರ ಹೊಸ ವರ್ಷವನ್ನು ಎಲ್ಲರೂ ಬರ ಮಾಡಿಕೊಳ್ಳುತ್ತಿದ್ದೇವೆ. ಈ ಮಹತ್ವದ ಸಂದರ್ಭವನ್ನು ಯಾವ ರಾಷ್ಟ್ರವು ಮೊದಲು ಮತ್ತು ಕೊನೆದಾಗಿ ಆಚರಿಸುತ್ತದೆ ಇದೀಗ ತಿಳಿಯೋಣ ಬನ್ನಿ..

2025 ವರ್ಷವನ್ನು ಸ್ವಾಗತಿಸಿದ ಮೊದಲ ರಾಷ್ಟ್ರ ಕಿರಿಬಾಟಿ 

ಹೊಸ ವರ್ಷದ ಹಬ್ಬಗಳು ಸಾಮಾನ್ಯವಾಗಿ ಓಷಿಯಾನಿಯಾ ಮತ್ತು ಆಸ್ಟ್ರೇಲಿಯಾದ ದ್ವೀಪಗಳಲ್ಲಿ ಪ್ರಾರಂಭವಾಗುತ್ತವೆ ಎಂದು ಗುರುತಿಸಲಾಗಿದೆ. ಆದರೆ, ಹೊಸ ವರ್ಷ 2025 ಅನ್ನು ಆರಂಭದಲ್ಲಿ ಪೆಸಿಫಿಕ್ ಸಾಗರಗಳಲ್ಲಿರುವ ಕಿರಿಬಾಟಿ ಎಂಬ ಸಣ್ಣ ದ್ವೀಪದಲ್ಲಿ ಸ್ವಾಗತಿಸಲಾಗುತ್ತದೆ.

IST (ಭಾರತೀಯ ಕಾಲಮಾನ) ಪ್ರಕಾರ ಡಿಸೆಂಬರ್ 31 ರಂದು ಮಧ್ಯಾಹ್ನ 01:30 ಕ್ಕೆ ರಾಷ್ಟ್ರವು ಹೊಸ ವರ್ಷವನ್ನು ಸ್ವಾಗತಿಸುತ್ತದೆ. ಇದರ ಬಳಿಕ ಟೊಂಗಾ ಮತ್ತು ಸಮೋವಾ ದೇಶಗಳು 2025ನ್ನು ಸ್ವಾಗತ  ಮಾಡಲಾತ್ತವೆ. ಬಳಿಕ ಅಂತಿಮವಾಗಿ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಹೊಸ ವರ್ಷ 2025 ಅನ್ನು ಆಚರಿಸಲಾಗುತ್ತದೆ.

ಪೆಸಿಫಿಕ್ ಮಹಾಸಾಗರದಲ್ಲಿ ಎರಡು ಜನವಸತಿಯಿಲ್ಲದ ಪ್ರದೇಶಗಳಾಗಿದ್ದು, 2025 ಅನ್ನು ಸ್ವಾಗತಿಸುವ ಅಂತಿಮ ಸ್ಥಳಗಳು ಬೇಕರ್ ದ್ವೀಪ ಮತ್ತು ಹೌಲ್ಯಾಂಡ್ ದ್ವೀಪವಾಗಿವೆ. ಎರಡೂ ದ್ವೀಪಗಳು ಕಿರಿಬಾಟಿಗಿಂತ 26 ಗಂಟೆಗಳ ಹಿಂದೆ ಇವೆ ಮತ್ತು ಹೊಸ ವರ್ಷವನ್ನು ಸ್ವಾಗತಿಸಲು ಕೊನೆಯದಾಗಿವೆ ಎಂದು ವರದಿ ಉಲ್ಲೇಖಿಸಿದೆ.  ಇನ್ನು ಹೊಸ ವರ್ಷವನ್ನು ಕೊನೆಯದಾಗಿವೆ ಸ್ವಾಗತಿಸುವ ವೇಳೆಗೆ ಭಾರತದಲ್ಲಿ ಜ.1ರ ಸಂಜೆ 05:30 PM ಆಗಿರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net