

Dewald Brevis: ಬೇಬಿ ಎಬಿಡಿ ಎಂದೇ ಪ್ರಖ್ಯಾತರಾಗಿರುವ ದಕ್ಷಿಣ ಆಫ್ರಿಕಾದ 22 ವರ್ಷದ ಡೆವಾಲ್ಡ್ ಬ್ರೆವಿಸ್, ಡಾರ್ವಿನ್‌ನ ಮರಾರಾ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ 41 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಆಫ್ರಿಕಾ ಪರ ಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡದ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದರು. ತಂಡದ ಸಂಕಷ್ಟದ ಸಮಯದಲ್ಲಿ ಕ್ರಿಸ್ಗೆ ಆಗಮಿಸಿದ ಬ್ರೆವಿಸ್ ಆಸಿಸ್ ಬಲಿಷ್ಠ ಬೌಲಿಂಗ್ ಪಡೆಯನ್ನು ಮನಸೋ ಇಚ್ಛೆ ದಂಡಿಸಿದರು. ಏಳನೇ ಓವರ್ ಎಸೆದ ಗ್ಲೆನ್ ಮ್ಯಾಕ್ಸ್ವೆಲ್ಗೆ ಬರೊಬ್ಬರಿ 23 ಬಾರಿಸಿದರು.
ಟ್ರಿಸ್ಟನ್ ಸ್ಟಬ್ಸ್ ಜೊತೆ 4ನೇ ವಿಕೆಟ್ಗೆ 126 ರನ್ಗಳ ಪಾಲುದಾರಿಕೆ ನಡೆಸಿದರು. ಅವರ ಈ ಅಬ್ಬರದ ಇನ್ನಿಂಗ್ಸ್ ಒಂಬತ್ತು ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳನ್ನು ಒಳಗೊಂಡಿತ್ತು.
ಬ್ರೆವಿಸ್ ಈಗ ಪುರುಷರ ಕ್ರಿಕೆಟ್‌ನಲ್ಲಿ T20I ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಎಂಟನೇ ಬ್ಯಾಟ್ಸ್‌ಮನ್ ಆಗಿದ್ದು, ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್ ಮತ್ತು ಮಿಲ್ಲರ್ ಈ ಪಟ್ಟಿಯಲ್ಲಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಬ್ರೇವಿಸ್ ಪಾತ್ರರಾದರು.(ಏಜೆನ್ಸೀಸ್)
1 - ಡೇವಿಡ್ ಮಿಲ್ಲರ್: 2017 ರಲ್ಲಿ ಬಾಂಗ್ಲಾದೇಶ ವಿರುದ್ಧ 35 ಎಸೆತಗಳು
2 - ಡೆವಾಲ್ಡ್ ಬ್ರೆವಿಸ್: 2025 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 41 ಎಸೆತಗಳು
3 - ಕ್ವಿಂಟನ್ ಡಿ ಕಾಕ್: 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 43 ಎಸೆತಗಳು
4 - ರಿಚರ್ಡ್ ಲೆವಿ: 2012 ರಲ್ಲಿ ನ್ಯೂಜಿಲೆಂಡ್ ವಿರುದ್ಧ 45 ಎಸೆತಗಳು
5 - ಫಾಫ್ ಡು ಪ್ಲೆಸಿಸ್ : 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 46 ಎಸೆತಗಳು