

ರಾಂಚಿ: ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ಬಂಗಾಳದ ವೇಗಿ ಆಕಾಶ್ ದೀಪ್ಗೆ ರಾಂಚಿಯಲ್ಲಿ ಭಾರತ ತಂಡದ ಪರ ಪದಾರ್ಪಣೆಯ ಅವಕಾಶ ಲಭಿಸುವ ಸಾಧ್ಯತೆ ಇದೆ. ಜತೆಗೆ ರಜತ್ ಪಾಟೀದಾರ್ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ರಾಂಚಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಚತುರ್ದಿನ ಪಂದ್ಯದಲ್ಲಿ 10 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾದ ಕರೆ ಪಡೆದಿದ್ದ 27 ವರ್ಷದ ಆಕಾಶ್, ಅದೇ ನಿರ್ವಹಣೆಯ ಆಧಾರದಲ್ಲಿ ಬಂಗಾಳದ ಮತ್ತೋರ್ವ ವೇಗಿ ಮುಕೇಶ್ ಕುಮಾರ್ರನ್ನು ಹಿಮ್ಮೆಟ್ಟಿಸಿ ಮೊಹಮದ್ ಸಿರಾಜ್ ಜತೆಗೆ ಹೊಸ ಚೆಂಡು ಹಂಚಿಕೊಳ್ಳುವ ನಿರೀೆ ಇದೆ. ಆಕಾಶ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇದುವರೆಗೆ 30 ಪಂದ್ಯಗಳಲ್ಲಿ 104 ವಿಕೆಟ್ ಕಬಳಿಸಿದ್ದಾರೆ. ಕಾರ್ಯದೊತ್ತಡ ತಗ್ಗಿಸುವ ಸಲುವಾಗಿ ಬುಮ್ರಾಗೆ ಶುಕ್ರವಾರ ಆರಂಭಗೊಳ್ಳಲಿರುವ ರಾಂಚಿ ಟೆಸ್ಟ್ನಿಂದ ವಿಶ್ರಾಂತಿ ನೀಡಲಾಗಿದೆ.
ಮಧ್ಯಪ್ರದೇಶದ ಪಾಟೀದಾರ್ ಕಳೆದೆರಡು ಟೆಸ್ಟ್ಗಳಲ್ಲಿ ಆಡಿದ 4 ಇನಿಂಗ್ಸ್ಗಳಲ್ಲಿ ಕೇವಲ 46 ರನ್ ಗಳಿಸಿದ್ದಾರೆ. ಹೀಗಾಗಿ ಭರ್ಜರಿ ಾಮ್ರ್ನಲ್ಲಿರುವ ಪಡಿಕ್ಕಲ್ಗೆ ಅವಕಾಶ ನಿರೀಸಲಾಗುತ್ತಿದೆ. 5 ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತ 2&1 ಮುನ್ನಡೆಯಲ್ಲಿದ್ದು, ರಾಂಚಿಯಲ್ಲೂ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
ರಾಂಚಿ ಟೆಸ್ಟ್ಗೆ ಖಲಿಸ್ತಾನಿ ಉಗ್ರ ಬೆದರಿಕೆ
ರಾಂಚಿ: ಭಾರತ&ಇಂಗ್ಲೆಂಡ್ ನಡುವಿನ ರಾಂಚಿ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಬೇಕು, ಇಲ್ಲದಿದ್ದರೆ ಪಂದ್ಯಕ್ಕೆ ಅಡಚಣೆ ತರುತ್ತೇನೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬೆದರಿಕೆ ಒಡ್ಡಿದ್ದಾನೆ. ಇದರ ಬೆನ್ನಲ್ಲೇ ಜಾರ್ಖಂಡ್ ಪೊಲೀಸರು ಆತನ ವಿರುದ್ಧ ಎ್ಐಆರ್ ದಾಖಲಿಸಿಕೊಂಡಿದ್ದಾರೆ.