

ಟೆಹ್ರಾನ್: ಭಾರತದ ಉದಯೋನ್ಮುಖ ಅಥ್ಲೀಟ್ಗಳಾದ ಜ್ಯೋತಿ ಯರಾಜಿ ಮತ್ತು ಹರ್ಮಿಲನ್ ಬೈನ್ಸ್ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.
ಏಷ್ಯಾಡ್ ರಜತ ವಿಜೇತೆ ಜ್ಯೋತಿ ಶನಿವಾರ ನಡೆದ ಮಹಿಳೆಯರ 60 ಮೀ. ಹರ್ಡಲ್ಸ್ನಲ್ಲಿ 8.12 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ತನ್ನದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಸುಧಾರಿಸಿಕೊಂಡರು.
ಕಳೆದ ವರ್ಷ ಅವರು 8.13 ಸೆಕೆಂಡ್ನಲ್ಲಿ ಓಡಿದ್ದು ಹಿಂದಿನ ದಾಖಲೆಯಾಗಿತ್ತು. ಮತ್ತೋರ್ವ ಏಷ್ಯಾಡ್ ರಜತ ವಿಜೇತೆ ಹರ್ಮಿಲನ್ ಮಹಿಳೆಯರ 1,500 ಮೀ. ಓಟದಲ್ಲಿ 4 ನಿಮಿಷ, 29.55 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನಕ್ಕೆ ಮುತ್ತಿಟ್ಟರು.