ಬಿಸಿಸಿಐನಲ್ಲಿ ಜಯ್​ ಷಾ ಉತ್ತರಾಧಿಕಾರಿ ನೇಮಕ; ವಿಶೇಷ ಅಧಿಕಾರ ಬಳಸಿದ ಅಧ್ಯಕ್ಷ ರೋಜರ್​ ಬಿನ್ನಿ!

web bcci sc
Published on

ನವದೆಹಲಿ: ಅಸ್ಸಾಂನ ದೇವಜಿತ್​ ಸೈಕಿಯಾ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿಯಾಗಿ ಮಂಡಳಿಯ ಅಧ್ಯಕ್ಷ ರೋಜರ್​ ಬಿನ್ನಿ ಅವರಿಂದ ನೇಮಕಗೊಂಡಿದ್ದಾರೆ.

ಜಯ್​ ಷಾ ಇತ್ತೀಚೆಗೆ ಐಸಿಸಿ ಚೇರ್ಮನ್​ ಆಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ, ಬಿನ್ನಿ ತನ್ನ ವಿಶೇಷ ಸಾಂವಿಧಾನಿಕ ಅಧಿಕಾರವನ್ನು ಬಳಸಿ ಮುಂದಿನ ವರ್ಷ ಸೆಪ್ಟೆಂಬರ್​ವರೆಗೂ ಸೈಕಿಯಾರನ್ನು ನೇಮಿಸಿದ್ದಾರೆ.

ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ 55 ವರ್ಷದ ಸೈಕಿಯಾ ಇದುವರೆಗೆ ಬಿಸಿಸಿಐ ಜಂಟಿ ಕಾರ್ಯದರ್ಶಿಯಾಗಿದ್ದರು. ಇನ್ನು ಮುಂದಿನ ವರ್ಷದ ಸೆಪ್ಟೆಂಬರ್​ನಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲೇ ಪೂರ್ಣ ಪ್ರಮಾಣದ ಕಾರ್ಯದರ್ಶಿಯ ಆಯ್ಕೆಯಾಗಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net