ಐಪಿಎಲ್​ ಹರಾಜಿನಲ್ಲಿ ದೇಶೀಯ ಕ್ರಿಕೆಟಿಗರಿಗೆ ಲಕ್; ಒಲಿದ ಭಾರಿ ಮೊತ್ತ!

domestic web
Published on

ದುಬೈ: ಮಂಗಳವಾರ ನಡೆದ ಐಪಿಎಲ್​ ಆಟಗಾರರ ಹರಾಜಿನಲ್ಲಿ ದೇಶೀಯ ಬ್ಯಾಟರ್​ಗಳು ಭಾರಿ ಬೇಡಿಕೆ ಪಡೆದರು. ಕಳೆದ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಎದುರಿಸಿದ ಪ್ರತಿ 11 ಎಸೆತಕ್ಕೊಂದರಂತೆ 18 ಸಿಕ್ಸರ್​ ಸಿಡಿಸಿ ಮಿಂಚಿದ್ದ ಉತ್ತರ ಪ್ರದೇಶದ 20 ವರ್ಷದ ಬ್ಯಾಟರ್​ ಸಮೀರ್​ ರಿಜ್ವಿ 8.40 ಕೋಟಿ ರೂ.ಗೆ ಸಿಎಸ್​ಕೆ ತಂಡ ಸೇರಿದರು. ಯುಪಿ ಟಿ20 ಲೀಗ್​ನಲ್ಲೂ ಆರ್ಭಟಿಸಿದ್ದ ರಿಜ್ವಿ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು.

ವಿದರ್ಭದ ಎಡಗೈ ಬ್ಯಾಟರ್​ ಶುಭಂ ದುಬೆ 5.80 ಕೋಟಿ ರೂ.ಗೆ ರಾಜಸ್ಥಾನ ತಂಡ ಸೇರಿದರು. 29 ವರ್ಷದ ಶುಭಂ ಸಯ್ಯದ್​ ಮುಷ್ತಾಕ್​ ಟ್ರೋಫಿಯಲ್ಲಿ 187.28ರ ಸ್ಟ್ರೆ$ಕ್​ರೇಟ್​ನಲ್ಲಿ ರನ್​ ಸಿಡಿಸಿದ್ದರು. ತಮಿಳುನಾಡಿನ ಸ್ಫೋಟಕ ಬ್ಯಾಟರ್​ ಶಾರುಖ್​ ಖಾನ್​ 7.40 ಕೋಟಿ ರೂ.ಗೆ ಗುಜರಾತ್​ ಟೈಟಾನ್ಸ್​ ಪಾಲಾದರು. ಶಾರುಖ್​ರನ್ನು ಈ ಬಾರಿ ರಿಲೀಸ್​ ಮಾಡಿದ್ದ ಪಂಜಾಬ್​ ಕಿಂಗ್ಸ್​ ಕೂಡ ಅವರನ್ನು ಮರಳಿ ಸಂಪಾದಿಸಲು ಪೈಪೋಟಿಯೊಡ್ಡಿತು.

ಜಾರ್ಖಂಡ್​ ವಿಕೆಟ್​ ಕೀಪರ್​ ಕುಮಾರ್​ ಕುಶಾಗ್ರ 7.20 ಕೋಟಿ ರೂ.ಗೆ ಡೆಲ್ಲಿ ತಂಡ ಸೇರಿದರು. 19 ವರ್ಷದ ಕುಶಾಗ್ರ ಕಳೆದ ವಿಜಯ್​ ಹಜಾರೆ ಟ್ರೋಫಿ, ದೇವಧರ್​ ಟ್ರೋಫಿಯಲ್ಲೂ ಮಿಂಚಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net