ವಿಜಯ್​ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಫೈನಲ್​ ಹಾದಿಗೆ ಮುಳ್ಳಾದ ದೀಪಕ್​ ಹೂಡ!

kar web
Published on

ರಾಜ್​ಕೋಟ್​: ನಾಯಕ ದೀಪಕ್​ ಹೂಡ (180 ರನ್​, 128 ಎಸೆತ, 19 ಬೌಂಡರಿ, 5 ಸಿಕ್ಸರ್​) ಶತಕದ ಅಬ್ಬರದ ಎದುರು ಮಂಕಾದ ಕರ್ನಾಟಕ ತಂಡ ವಿಜಯ್​ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್​ ಟೂರ್ನಿಯ ಸೆಮಿಫೈನಲ್​ನಲ್ಲಿ ರಾಜಸ್ಥಾನ ಎದುರು 6 ವಿಕೆಟ್​ಗಳಿಂದ ಸೋಲು ಅನುಭವಿಸಿದೆ. ರಾಜಸ್ಥಾನ ತಂಡ ಶನಿವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಹರಿಯಾಣವನ್ನು ಎದುರಿಸಲಿದೆ.

ಎಸ್​ಸಿಎ ಸ್ಟೇಡಿಯಂನಲ್ಲಿ ಗುರುವಾರ ನಡೆದ ಉಪಾಂತ್ಯ ಹೋರಾಟದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಮಯಾಂಕ್​ ಅಗರ್ವಾಲ್​ ಪಡೆ, ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದ ನಡುವೆ ಅಭಿನವ್​ ಮನೋಹರ್​ (91 ರನ್​, 80 ಎಸೆತ, 10 ಬೌಂಡರಿ, 3 ಸಿಕ್ಸರ್​) ಮತ್ತು ಮನೋಜ್​ ಭಾಂಡಗೆ (63 ರನ್​, 39 ಎಸೆತ, 3 ಬೌಂಡರಿ, 5 ಸಿಕ್ಸರ್​) ಹೋರಾಟದಿಂದ 8 ವಿಕೆಟ್​ಗೆ 282 ರನ್​ ಪೇರಿಸಿತು. ಪ್ರತಿಯಾಗಿ ರಾಜಸ್ಥಾನ 23 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆಗ ಜತೆಗೂಡಿದ ದೀಪಕ್​ ಹೂಡ ಮತ್ತು ಕರಣ್​ ಲಾಂಬ (73*) ಜೋಡಿ 4ನೇ ವಿಕೆಟ್​ಗೆ 225 ಎಸೆತಗಳಲ್ಲಿ 255 ರನ್​ ಪೇರಿಸುವ ಮೂಲಕ ರಾಜಸ್ಥಾನವನ್ನು ಗೆಲ್ಲಿಸಿತು. ರಾಜಸ್ಥಾನ 43.4 ಓವರ್​ಗಳಲ್ಲಿ 4 ವಿಕೆಟ್​ಗೆ 283 ರನ್​ ಪೇರಿಸಿ ಜಯಿಸಿತು.

ಕರ್ನಾಟಕ: 8 ವಿಕೆಟ್​ಗೆ 282 (ಮಯಾಂಕ್​ 13, ನಿಕಿನ್​ 21, ಶ್ರೀಜಿತ್​ 37, ಮನೀಷ್​ 28, ಅಭಿನವ್​ 91, ಭಾಂಡಗೆ 63, ಅನಿಕೇತ್​ 43ಕ್ಕೆ 2), ರಾಜಸ್ಥಾನ: 43.3 ಓವರ್​ಗಳಲ್ಲಿ 4 ವಿಕೆಟ್​ಗೆ 283 (ದೀಪಕ್​ ಹೂಡ 180, ಕರಣ್​ ಲಾಂಬ 73*, ಕೌಶಿಕ್​ 28ಕ್ಕೆ 1, ವೈಶಾಕ್​ 58ಕ್ಕೆ 1, ಭಾಂಡಗೆ 57ಕ್ಕೆ 1, ಗೌತಮ್​ 60ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net