IND vs ENG: ಟೀ ಬ್ರೇಕ್​ ನಡುವೆ ಯಶಸ್ವಿ, ಸರ್ಫರಾಜ್ ಖಾನ್ ಗೊಂದಲ! ಏನಾಯಿತು? ವಾಪಾಸ್ ಏಕೆ? ಎಂದ ಹಿಟ್ ಮ್ಯಾನ್​

Untitled design - 2024-02-19T074914.200
Published on

ರಾಜ್​ಕೋಟ್: ಭಾನುವಾರ (ಫೆಬ್ರವರಿ 18) ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್‌ನ 4ನೇ ದಿನದಂದು ನಡೆದ ಕೆಲವು ಹಾಸ್ಯಮಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಮೈದಾನದಲ್ಲಿದ್ದ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಟೀ ಬ್ರೇಕ್ ಸಿಕ್ಕಿದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಆಗುವ ಮುನ್ನವೇ ಪೆವಿಲಿಯನ್​ನತ್ತ ಮುಖ ಮಾಡಿದ್ದನ್ನು ನೋಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಒಂದು ನಿಮಿಷ ಭಾರೀ ಆಶ್ಚರ್ಯಕ್ಕೆ ಒಳಗಾದರು. ಈ ದೃಶ್ಯ ಕೆಲವರಲ್ಲಿ ಗೊಂದಲ ಮೂಡಿಸಿದರೆ, ಇನ್ನು ಕೆಲವರಿಗೆ ಹಾಸ್ಯಸ್ಪದವಾಗಿ ಕಂಡುಬಂದಿದೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದ ನಾಲ್ಕನೇ ದಿನದಂದು ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​, ಕ್ರಿಕೆಟ್ ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು. ಇದರ ಹೊರತಾಗಿ ಆನ್​ಫೀಲ್ಡ್​ನಲ್ಲಿ ನಡೆಯುವ ಕೆಲವು ಘಟನೆಗಳು ಸಿಕ್ಕಾಪಟ್ಟೆ ವೇಗವಾಗಿ ಎಲ್ಲರ ಗಮನಸೆಳೆಯುತ್ತದೆ. ಭಾನುವಾರ ಕೂಡ ಅಂತಹದ್ದೇ ಒಂದು ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು.

ನಾಲ್ಕನೇ ದಿನದಾಟದ ಎರಡನೇ ಸೆಷನ್ ವೇಳೆ ಟೀ ಬ್ರೇಕ್​ ಸಮಯದಲ್ಲಿ ಆದ ಎಡವಟ್ಟಿನಿಂದ ಭಾರತದ ಇನ್ನಿಂಗ್ಸ್​ನಲ್ಲಿ ತೊಡಗಿದ್ದ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಇನ್ನಿಂಗ್ಸ್ ಡಿಕ್ಲೇರ್ ಆಗುವ ಮುನ್ನವೇ ಪೆವಿಲಿಯನ್‌ನತ್ತ ಮುಖಮಾಡಿದರು. ಈ ಬಗ್ಗೆ ಇಂಗ್ಲೆಂಡ್ ಆಟಗಾರರಲ್ಲಿಯೂ ಸಹ ಗೊಂದಲ ಮೂಡಿತ್ತು. ಯಶಸ್ವಿ ಮತ್ತು ಸರ್ಫರಾಜ್​ ಪೆವಿಲಿಯನ್​ ಕಡೆ ಬರುತ್ತಿರುವುದನ್ನು ಗಮನಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ ಒಂದು ನಿಮಿಷ ಭಾರೀ ಅಚ್ಚರಿಗೊಂಡಿದ್ದು, ಏನು ಮಾಡುತ್ತಿದ್ದೀರಿ? ಯಾಕೆ? ಎಂದು ಕೈ ಸನ್ನೆ ಮಾಡುವ ಮೂಲಕ ಇಬ್ಬರನ್ನೂ ವಾಪಾಸ್​ ಬ್ಯಾಟಿಂಗ್‌ಗೆ ಕಳುಹಿಸಿದರು.

ಸದ್ಯ ಈ ಒಂದು ದಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಕ್ರಿಕೆಟ್ ಅಭಿಮಾನಿಗಳು ಹಾಗೂ ನೆಟ್ಟಿಗರ ಗಮನ ಸೆಳೆಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net