ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಬೆನ್ನಲ್ಲೇ ಕೋಚ್​ ಆಗುವ ಆಸೆ ವ್ಯಕ್ತಪಡಿಸಿದ ಡೇವಿಡ್​ ವಾರ್ನರ್​

warner web
Published on

ಸಿಡ್ನಿ: ಟೆಸ್ಟ್​-ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಆಸ್ಟ್ರೆಲಿಯಾದ ಎಡಗೈ ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್​ ಭವಿಷ್ಯದಲ್ಲಿ ಕೋಚ್​ ಆಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ, ಐಪಿಎಲ್​ನಂಥ ಟಿ20 ಲೀಗ್​ಗಳಲ್ಲಿ ವಿವಿಧ ದೇಶಗಳ ಆಟಗಾರರು ಡ್ರೆಸ್ಸಿಂಗ್​ ರೂಂ ಹಂಚಿಕೊಳ್ಳುತ್ತಿರುವುದರಿಂದ ಮುಂದಿನ ದಶಕದಲ್ಲಿ ಸ್ಲೆಡ್ಜಿಂಗ್​ ಮರೆಯಾಗಲಿದೆ ಎಂದು ಹೇಳಿದ್ದಾರೆ.

37 ವರ್ಷದ ವಾರ್ನರ್​ ಇನ್ನು ಆಸೀಸ್​ ಪರ ಅಂತಾರಾಷ್ಟ್ರೀಯ ಟಿ20 ಮತ್ತು ವಿವಿಧ ದೇಶಗಳ ಟಿ20 ಲೀಗ್​ಗಳಲ್ಲಿ ಮಾತ್ರ ಆಡಲಿದ್ದಾರೆ. ಭವಿಷ್ಯದಲ್ಲಿ ಕೋಚ್​ ಹುದ್ದೆ ಒಪ್ಪಿಕೊಳ್ಳುವ ಮುನ್ನ, ಕೆಲ ತಿಂಗಳುಗಳ ಕಾಲ ಮನೆಯಿಂದ ಹೊರಗಿರಲು ಪತ್ನಿಯಿಂದ ಅನುಮತಿಯನ್ನೂ ಪಡೆದುಕೊಳ್ಳಬೇಕಾಗುತ್ತದೆ ಎಂದು ವಾರ್ನರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net