ಸಚಿನ್ ತೆಂಡುಲ್ಕರ್​ ಫೌಂಡೇಷನ್​ನಲ್ಲೇ ಕೆಲಸಕ್ಕೆ ಸೇರಿದ ಪುತ್ರಿ ಸಾರಾ!

web sara
Published on

ಮುಂಬೈ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಪುತ್ರಿ ಸಾರಾ ತೆಂಡುಲ್ಕರ್​ ಇದೀಗ ಅಪ್ಪನ ಎನ್​ಜಿಒ ಸಂಸ್ಥೆಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಸಚಿನ್​ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.

ಲಾಭರಹಿತ ಸಚಿನ್​ ತೆಂಡುಲ್ಕರ್​ ಫೌಂಡೇಷನ್​ನಲ್ಲಿ 27 ವರ್ಷದ ಸಾರಾ ನಿರ್ದೇಶಕಿ ಆಗಿ ನೇಮಕಗೊಂಡಿದ್ದಾರೆ. ಸಾರಾ ಲಂಡನ್​ನ ಯುನಿವರ್ಸಿಟಿ ಕಾಲೇಜಿನಲ್ಲಿ ಕ್ಲಿನಿಕಲ್​ ಮತ್ತು ಸಾರ್ವಜನಿಕ ಆರೋಗ್ಯ ಪೋಷಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಮಕ್ಕಳ ವೈದ್ಯೆಯಾಗಿರುವ ಸಚಿನ್​ ಪತ್ನಿ ಅಂಜಲಿ ತೆಂಡುಲ್ಕರ್​ 2019ರಲ್ಲಿ ಸಚಿನ್​ ತೆಂಡುಲ್ಕರ್​ ಫೌಂಡೇಷನ್​ ಸ್ಥಾಪಿಸಿದ್ದರು. ಇದು ಬಡ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಅಂಜಲಿ ಕೂಡ ಇದರ ನಿರ್ದೇಶಕಿಯಾಗಿದ್ದಾರೆ.

ಸಚಿನ್​ ಪುತ್ರ ಅರ್ಜುನ್​ ತೆಂಡುಲ್ಕರ್​ ವೃತ್ತಿಪರ ಕ್ರಿಕೆಟಿಗನಾಗಿದ್ದು, ದೇಶೀಯ ಕ್ರಿಕೆಟ್​ನಲ್ಲಿ ಗೋವಾ ಪರ ಆಡುತ್ತಾರೆ. 25 ವರ್ಷದ ಅರ್ಜುನ್​ ಇತ್ತೀಚೆಗೆ ಐಪಿಎಲ್​ ಮೆಗಾ ಹರಾಜಿನಲ್ಲಿ 30 ಲಕ್ಷ ರೂ. ಮೂಲಬೆಲೆಗೆ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮರಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net