ಐಪಿಎಲ್​ ನಂತರ ಡಬ್ಲ್ಯುಪಿಎಲ್ ಆಟಗಾರ್ತಿಯರ ಮಿನಿ ಹರಾಜಿಗೆ ಮುಹೂರ್ತ ಫಿಕ್ಸ್​​!

web wpl
Published on

ಬೆಂಗಳೂರು: ಮಹಿಳಾ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) 3ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್​ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ. 5 ಫ್ರಾಂಚೈಸಿಗಳು ಈ ಬಾರಿ 15 ಕೋಟಿ ರೂ. ಬಜೆಟ್​ ಮಿತಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಕಳೆದ ವರ್ಷ ಬಜೆಟ್​ ಮಿತಿ 13.5 ಕೋಟಿ ರೂ. ಆಗಿತ್ತು.

ಇಂಗ್ಲೆಂಡ್​ ನಾಯಕಿ ಹೀದರ್​ ನೈಟ್​, ನ್ಯೂಜಿಲೆಂಡ್​ ವೇಗಿ ಲಿಯಾ ತಹುಹು, ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಡಿಯೇಂಡ್ರಾ ಡಾಟಿನ್​ ಸಹಿತ ಕೆಲ ಪ್ರಮುಖ ಅಂತಾರಾಷ್ಟ್ರೀಯ ಆಟಗಾರ್ತಿಯರೂ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಭಾರತೀಯರಲ್ಲಿ ಆಲ್ರೌಂಡರ್​ ಸ್ನೇಹಾ ರಾಣಾ, ಲೆಗ್​ ಸ್ಪಿನ್ನರ್​ ಪೂನಂ ಯಾದವ್​ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖರಾಗಿದ್ದಾರೆ.

ಪ್ರಮುಖ ಆಟಗಾರ್ತಿಯರ ರಿಟೇನ್​ ಬಳಿಕ, ಕಳೆದ 2 ಆವೃತ್ತಿ ರನ್ನರ್​ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಹರಾಜಿನಲ್ಲಿ ಕನಿಷ್ಠ 2.5 ಕೋಟಿ ರೂ. ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ. ಕಳೆದ 2 ಆವೃತ್ತಿಗಳಲ್ಲಿ ಕೊನೇ ಸ್ಥಾನ ಪಡೆದಿದ್ದ ಗುಜರಾತ್​ ಜೈಂಟ್ಸ್​ ತಂಡ ಗರಿಷ್ಠ 4.4 ಕೋಟಿ ರೂ. ಮೊತ್ತದೊಂದಿಗೆ ಪಾಲ್ಗೊಳ್ಳಲಿದೆ. ಸ್ಮೃತಿ ಮಂದನಾ ಸಾರಥ್ಯದ ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ 3.25 ಕೋಟಿ ರೂ. ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ. 3ನೇ ಆವೃತ್ತಿಯ ಡಬ್ಲ್ಯುಪಿಎಲ್​ 2025ರ ಫೆಬ್ರವರಿ-ಮಾರ್ಚ್​ನಲ್ಲಿ 3 ವಾರಗಳ ಕಾಲ ನಡೆಯುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net