

ಹೈದರಾಬಾದ್: ಆಸ್ಟ್ರೆಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮ್ಮಿನ್ಸ್ ಮುಂಬರುವ ಐಪಿಎಲ್ 17ನೇ ಆವೃತ್ತಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಹೊಸ ಸಾರಥಿಯಾಗಿ ಶೀಘ್ರದಲ್ಲೇ ನೇಮಕಗೊಳ್ಳುವ ಸಾಧ್ಯತೆ ಇದೆ.
ಕಳೆದ ಹರಾಜಿನಲ್ಲಿ ಕಮ್ಮಿನ್ಸ್ ದಾಖಲೆಯ 20.5 ಕೋಟಿ ರೂ.ಗೆ ಸನ್ರೈಸರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಈ ನಡುವೆ ಸನ್ರೈಸರ್ಸ್ ತಂಡದ ಹಾಲಿ ನಾಯಕ ಏಡನ್ ಮಾರ್ಕ್ರಮ್ ದಣ ಆಫ್ರಿಕಾದ ಟಿ20 ಲೀಗ್ನಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಆದರೂ, 2023ರಲ್ಲಿ ಆಸೀಸ್ ಪರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಮತ್ತು ಏಕದಿನ ವಿಶ್ವಕಪ್ ಗೆದ್ದ ಕಮ್ಮಿನ್ಸ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಸಾಧನೆಯನ್ನೇ ನಾಯಕತ್ವಕ್ಕೆ ಪರಿಗಣಿಸಲು ಸನ್ರೈಸರ್ಸ್ ಫ್ರಾಂಚೈಸಿ ಸಿದ್ಧವಾಗಿದೆ ಎನ್ನಲಾಗಿದೆ. ಇದಲ್ಲದೆ, ಆಸೀಸ್ ತಂಡಕ್ಕೆ ಸಹಾಯಕ ಕೋಚ್ ಆಗಿರುವ ಡೇನಿಯಲ್ ವೆಟ್ಟೋರಿ ಅವರೇ ಸನ್ರೈಸರ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ. ಹೀಗಾಗಿ ಇವರಿಬ್ಬರ ಕಾಂಬಿನೇಷನ್ ಮೇಲೆ ನಂಬಿಕೆ ಇಟ್ಟು ನಾಯಕತ್ವ ವರ್ಗಾವಣೆಯಾಗಲಿದೆ ಎನ್ನಲಾಗಿದೆ.
ಈ ನಡುವೆ ಸನ್ರೈಸರ್ಸ್ ತಂಡದ ಬೌಲಿಂಗ್ ಕೋಚ್ ಹಾಗೂ ದಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೆ$ನ್ ವೈಯಕ್ತಿಕ ಕಾರಣ ನೀಡಿ ಐಪಿಎಲ್ 17ನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ನ ಮಾಜಿ ಆಲ್ರೌಂಡರ್ ಜೇಮ್ಸ್ ್ರಾಂಕ್ಲಿನ್ ತಂಡದ ಹೊಸ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.