

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಈಗಾಗಲೇ ಅದ್ದೂರಿ ಚಾಲನೆ ದೊರೆತಿದ್ದು, ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು, ಗಾಯಕರ ಹಾಡು, ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಇನ್ನು ಈ ಬಾರಿಯ ಐಪಿಎಲ್ನ ಕಿಕ್ಸ್ಟಾರ್ಟ್ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರುತುರಾಜ್ ಗಾಯಕ್ವಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆರ್ಸಿಬಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಇನ್ನು ಮಹೇಂದ್ರ ಸಿಂಗ್ ಧೋನಿ ಅವರ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ರುತುರಾಜ್ ಗಾಯಕ್ವಾಡ್ ಅಖಾಡಕ್ಕೆ ಇಳಿದಿದ್ದು, ಇಂದು ನಡೆದ ಅದ್ದೂರಿ ಐಪಿಎಲ್ ಓಪನಿಂಗ್ ಸಮಾರಂಭದಲ್ಲಿ ಐಪಿಎಲ್ ಟ್ರೋಫಿಯೊಂದಿಗೆ ಹೊರನಡೆದರು. ಸದ್ಯ ಟ್ರೋಫಿಯೊಂದಿಗೆ ಕ್ಯಾಪ್ಟನ್ ರುತುರಾಜ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೂ ಮುಂಚಿತವೇ ಈ ಫೋಟೋಗೆ ಸಿಕ್ಕಾಪಟ್ಟೆ ಅಭಿಪ್ರಾಯಗಳು ಹರಿದುಬರುತ್ತಿವೆ.
ಈ ಬಾರಿಯ ಐಪಿಎಲ್ ಆವೃತ್ತಿಯನ್ನು ವಶಪಡಿಸಿಕೊಳ್ಳಲಿರುವ ಸಿಎಸ್ಕೆ, 6ನೇ ಸಲ ಕಪ್ ಎತ್ತಲಿದೆ. ಚಾಂಪಿಯನ್ಸ್ ಆಗಿ ಹೊರಹೊಮ್ಮಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಆಶಿಸಿದ್ದಾರೆ. ಈಗಿನ ವರದಿ ಪ್ರಕಾರ, ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ 10 ಓವರ್ಗೆ 4 ವಿಕೆಟ್ ಕಳೆದುಕೊಂಡಿದೆ,(ಏಜೆನ್ಸೀಸ್).