ಧೋನಿ 7ನೇ ಕ್ರಮಾಂಕದಲ್ಲಿ ಬಂದರೂ ದಕ್ಕದ ಗೆಲುವು: ಸಿಎಸ್​ಕೆ ವಿರುದ್ಧ ರಾಜಸ್ಥಾನಕ್ಕೆ ರೋಚಕ ಜಯ! CSK vs RR

CSK vs RR
Published on

CSK vs RR : ನಿನ್ನೆ (ಮಾರ್ಚ್​ 30) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ನಡೆದ 11ನೇ ಐಪಿಎಲ್​ ಪಂದ್ಯದಲ್ಲಿ ರಿಯಾನ್​ ಪರಾಗ್​ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಜಯ ದಾಖಲಿಸಿತು.

ಕೊನೆಯ ಓವರ್​​​​ವರೆಗೂ ಈ ಪಂದ್ಯ ರೋಚಕತೆಯಿಂದ ಕೂಡಿತ್ತು. ಚೆನ್ನೈ ಪರ ಜಡೇಜಾ (32) ಮತ್ತು ಧೋನಿ (16) ಕೊನೆಯಲ್ಲಿ ಪ್ರಯತ್ನಿಸಿದರೂ ಕೂಡ ಗೆಲುವು ಸಿಗಲಿಲ್ಲ. ಇದರಿಂದ ಸಿಎಸ್​ಕೆ ಅಭಿಮಾನಿಗಳಿ ಮತ್ತೊಮ್ಮೆ ನಿರಾಸೆಯಾಯಿತು. ಇದು ಚೆನ್ನೈ ತಂಡಕ್ಕೆ ಎರಡನೇ ಸೋಲಾದರೆ, ರಾಜಸ್ಥಾನ ತಂಡಕ್ಕೆ ಈ ಸೀಸನ್​ನ ಮೊದಲ ಗೆಲುವು ದಾಖಲಿಸಿರು.

ಸಿಎಸ್‌ಕೆ ಪರ ನಾಯಕ ರುತುರಾಜ್ ಗಾಯಕ್ವಾಡ್ (63) ಅರ್ಧಶತಕ ಗಳಿಸಿದರು. ರಾಹುಲ್ ತ್ರಿಪಾಠಿ (23), ಶಿವಂ ದುಬೆ (18), ವಿಜಯ್ ಶಂಕರ್ (9), ಮತ್ತು ಜೇಮಿ ಓವರ್ಟನ್ (11) ರನ್ ಗಳಿಸಿದರು. ರಾಜಸ್ಥಾನ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿದರು. ವನಿಂದು ಹಸರಂಗ ಅವರು 4 ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಸಂದೀಪ್ ಶರ್ಮಾ ಮತ್ತು ಆರ್ಚರ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು, ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ರಾಜಸ್ಥಾನ ರಾಯಲ್ಸ್ ಪರ ನಿತೀಶ್ ರಾಣಾ (81) ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಮಿಂಚಿದ ರಾಣಾ, ಅರ್ಧಶತಕ ಗಳಿಸಿ ತಂಡವನ್ನು ಬೃಹತ್ ಸ್ಕೋರ್‌ಗೆ ಸೇರಿಸಿದರು. ಅವರಿಗೆ ರಿಯಾನ್ ಪರಾಗ್ (37) ಉತ್ತಮ ಬೆಂಬಲ ನೀಡಿದರು. ಆದಾಗ್ಯೂ, ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (4) ಬೇಗನೆ ಔಟಾದರು. ಅಲ್ಲದೆ, ಸಂಜು ಸ್ಯಾಮ್ಸನ್ (20) ಕೂಡ ಪ್ರಭಾವ ಬೀರಲಿಲ್ಲ. ಚೆನ್ನೈ ಬೌಲರ್‌ಗಳಲ್ಲಿ ನೂರ್ ಅಹ್ಮದ್ (2/28) ಮತ್ತು ಮತಿಶಾ ಪತಿರಾಣಾ (2/28) ಉತ್ತಮವಾಗಿ ಬೌಲಿಂಗ್ ಮಾಡಿದರು. ಖಲೀಲ್ ಅಹ್ಮದ್ ಕೂಡ ಎರಡು ನಿರ್ಣಾಯಕ ವಿಕೆಟ್ ಪಡೆದರು. ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.

ಧೋನಿ ಇದ್ದರೂ ಆಗಲಿಲ್ಲ

ಈ ಹಿಂದೆ ಆರ್​ಸಿಬಿ ವಿರುದ್ಧ ಪಂದ್ಯದಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಬಂದಿದ್ದರು. ಇದು ಭಾರಿ ಟೀಕೆಗೆ ಗುರಿಯಾಯಿತು. ಸೋಲಿಗೆ ಧೋನಿಯವರೇ ಕಾರಣ ಎಂದು ಕೆಲವರು ನಿಂದಿಸಿದ್ದರು. ಆದರೆ, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವಿಗೆ ಸಾಕಷ್ಟು ರನ್​ ಬೇಕಿತ್ತು. ಇನ್ನು ನಿನ್ನೆಯ ಪಂದ್ಯದಲ್ಲಿ ಧೋನಿ ಅವರು ಎಂದಿನಂತೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದರು. ಈ ವೇಳೆ ಗೆಲುವಿನ ಅಂತರವೂ ಕಡಿಮೆ ಇತ್ತು. ಕೊನೆಯ ಓವರ್​ನಲ್ಲಿ 20 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಮತ್ತು ಜಡೇಜಾ ಕ್ರೀಸ್​ನಲ್ಲಿದ್ದರು. ಸಂದೀಪ್​ ಶರ್ಮಾ ಬೌಲಿಂಗ್​ ಮಾಡಿದರು. ಧೋನಿ ತಮ್ಮದೇ ಸ್ಟೈಲ್​ನಲ್ಲಿ ಪಂದ್ಯವನ್ನು ಮುಗಿಸುತ್ತಾರೆ ಎಂದು ಭಾವಿಸಿದ್ದರು. ಆದರೆ, ಸಂದೀಪ್​ ಶರ್ಮ ಎಸೆದ ಮೊದಲ ಎಸೆತದಲ್ಲೇ ಕ್ಯಾಚ್​ ನೀಡಿ ಡಗೌಟ್​ ತಲುಪಿದರು. ಇದರಿಂದ ಸಿಎಸ್​ಕೆ ಅಭಿಮಾನಿಗಳಿಗೆ ಭಾರಿ ನಿರಾಸೆಯಾಯಿತು.​ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net