

CSK vs LSG: ಇಂದು (ಏ.14) ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್ಕೆ ಮತ್ತು ಎಲ್ಎಸ್ಜಿ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಧೋನಿ ಪಡೆ, ಲಖನೌಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು.
ಅಂತೆಯೇ ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿಗೆ ಉತ್ತಮ ಆರಂಭ ಸಿಗಲಿಲ್ಲ. ಆ್ಯಡಮ್ ಮಾರ್ಕ್ರಮ್ ವಿಕೆಟ್ ಪತನಗೊಂಡ ಬೆನ್ನಲ್ಲೇ ಮಿಚೆಲ್ ಮಾರ್ಶ್ ಸ್ಫೋಟಕ ಬ್ಯಾಟಿಂಗ್ ಶುರುಮಾಡಿದರು. ಆದ್ರೆ, ಇದು ಹೆಚ್ಚು ಕಾಲ ಉಳಿಯಲಿಲ್ಲ. ಆ ನಂತರ ಕ್ರೀಸ್ಗೆ ಬಂದ ನಿಕೋಲಸ್ ಪೂರನ್, ಆಯುಷ್ ಬದೋನಿ ಬಹುಬೇಗನೇ ಪೆವಿಲಿಯನ್ಗೆ ತೆರಳಿದರು.
ನಂತರದಲ್ಲಿ ಬಂದ ರಿಷಭ್ ಪಂತ್, ಸ್ಫೋಟಿಂಗ್ ಬ್ಯಾಟಿಂಗ್ ನಡೆಸುವ ಮೂಲಕ ಕ್ಯಾಪ್ಟನ್ ಪ್ರದರ್ಶನ ತೋರಿದರು. ಏಕಾಂಗಿ ಹೋರಾಟ ನಡೆಸಿದ ಪಂತ್, ತಂಡದ ಮೊತ್ತವನ್ನು 150 ಗಡಿದಾಟಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದರು. ಅಂತಿಮವಾಗಿ 20 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡ ಎಲ್ಎಸ್ಜಿ 166 ರನ್ ಕಲೆಹಾಕಿತು. 167 ರನ್ಗಳ ಗುರಿಯನ್ನು ಸಿಎಸ್ಕೆ ಬೆನ್ನಟ್ಟಲಿದೆಯಾ? ಆರನೇ ಸೋಲಿನಿಂದ ತಪ್ಪಿಸಿಕೊಳ್ಳಲಿದೆಯಾ? ಎಂಬುದನ್ನು ಎರಡನೇ ಇನ್ನಿಂಗ್ಸ್ನಲ್ಲಿ ಕಾದುನೋಡಬೇಕಿದೆ.