Cristiano Ronaldo ಇಸ್ಲಾಂಗೆ ಮತಾಂತರ ಆಗಲು ಬಯಸಿದ್ದಾರೆ.. ಮಾಜಿ ಫುಟ್ಬಾಲ್​ ಆಟಗಾರನ ಹೇಳಿಕೆ ವೈರಲ್​

Cristiano Ronaldo
Published on

ನವದೆಹಲಿ: ಪೋರ್ಚಗೀಸ್​ ಫುಟ್ಬಾಲ್​​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಬಯಸುತ್ತಿದ್ದಾರೆ ಎಂದು ಸೌದಿ ಅರೇಬಿಯಾದ ಫುಟ್ಬಾಲ್​ ಕ್ಲಬ್​ ಆಲ್​-ನಾಸ್ರ್​ನ​ ಮಾಜಿ ಗೋಲ್​ ಕೀಪರ್​ ವಲೀದ್​ ಅಬ್ದುಲ್ಲಾ ಹೇಳಿದ್ದಾರೆ.

ಅರಬ್​ ಟಿ.ವಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಬ್ದುಲ್ಲಾ, '' ರೊನಾಲ್ಡೊ ನಿಜವಾಗಿಯೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುತ್ತಿದ್ದಾರೆ. ನಾನು ಇ ವಿಷಯದ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಅವರೂ ಕೂಡ ಈ ವಿಷಯದಲ್ಲಿ ತುಂಬಾ ಕುತೂಹಲದಿಂದ ತಮ್ಮ ಆಸಕ್ತಿಯನ್ನು ವ್ಯಕ್ತಪಡಿದ್ದಾರೆ'' ಎಂದು ಹೇಳಿದ್ದಾರೆ.

ಮುಂದುವರೆಸಿ ಮಾತನಾಡಿರುವ ಅವರು, ಮೈದಾನದಲ್ಲಿ ರೊನಾಲ್ಡೊ ಇಸ್ಲಾಮಿಕ್​ ಧರ್ಮಕ್ಕೆ ಸಂಬಂಧಿಸಿದ ಸಂಸ್ಕೃತಿಗಳನ್ನು ಅಗಾಗ ಪ್ರದರ್ಶಿಸುವುದನ್ನು ನೀವು ಕಂಡಿರಬಹುದು. ಅಲ್ಲದೆ, ಸಹ ಆಟಗಾರಿರಗೂ ಇಸ್ಲಾಂ ಧಾರ್ಮಿಕ ಆಚರಣೆಗಳನ್ನು ಅನುಸರಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾಗೆ ಮೊದಲ ಬಾರಿಗೆ ಆಗಮಿಸಿದ ನಂತರ ರೊನಾಲ್ಡೊ ಇಲ್ಲಿನ ಇಸ್ಲಾಂ ಧಾರ್ಮಿಕ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಬಹು ಉತ್ಸುಕರಾಗಿದ್ದರು. ನಮ್ಮ ಧಾರ್ಮಿಕ ಆಚರಣೆಗಳ ಬಗ್ಗೆ ತುಂಬಾ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಿದ್ದರು. ರೊನಾಲ್ಡೊ ಅವರು ಕ್ರೀಡಾಂಗದಲ್ಲಿ ಮಾತ್ರವಲ್ಲ ಹೊರಗೂ ತುಂಬಾ ಶಿಸ್ತಿನಿಂದ ಇರುತ್ತಾರೆ ಎಂದು ಅವರ ಸಾಧನೆಯನ್ನು ಅಬ್ದುಲ್ಲಾ ವಿವರಿಸಿದ ಬಗ್ಗೆ ವಿಡಿಯೋದಲ್ಲಿ ಇದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net