ಕ್ರಿಕೆಟಿಗನ ಪತ್ನಿಯನ್ನು ಹಿಂಬಾಲಿಸಿ ಕಿರುಕುಳ; ಓರ್ವನ ಬಂಧನ

nitish rana
Published on

ನವದೆಹಲಿ: ಸೆಲೆಬ್ರಿಟಿಗಳು ಹಾಗೊಮ್ಮೆ ಈಗೊಮ್ಮೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ ಮತ್ತು ಪೇಚಿಗೆ ಸಿಲಕುತ್ತಾರೆ.

ಕೆಲವರು ಫೋಟೋಗೋಸ್ಕರ ಸೆಲೆಬ್ರಿಟಿಗಳನ್ನು ಹಿಂಬಾಲಿಸಿ ಪೊಲೀಸ್​ ಠಾಣೆಯ ಮೆಟ್ಟಿಲೇರುವ ಸುದ್ದಿಯಾಗುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಕ್ರಿಕೆಟಿಗನ ಪತ್ನಿಗೆ ಕಿರುಕುಳ

ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ನಾಯಕ ನಿತೀಶ್​ ರಾಣಾ ಪತ್ನಿ ಸಾಚಿ ಮರ್ವಾ ಯನ್ನು ಹಿಂಬಾಲಿಸಿರುವ ಆರೋಪಿಗಳು ಅರೋಪಿಗಳು ಕಿರುಕುಳ ನೀಡಲು ಯತ್ನಿಸಿದ್ದಾರೆ.

ದೆಹಲಿಯ ಕೀರ್ತಿನಗರದಲ್ಲಿ ಸಾಚಿ ಅವರನ್ನು ಬೈಕಿನಲ್ಲಿ ಹಿಂಬಾಲಿಸಲು ಶುರು ಮಾಡಿದ ಆರೋಪಿಗಳು ಅವರ ಕಾರಿನ ಬಾಗಿಲು ಹಾಗೂ ಗ್ಲಾಸ್​ ಮೇಲೆ ಹೊಡೆಯಲು ಶುರು ಮಾಡಿದ್ದಾರೆ.

ಈ ವೇಳೆ ಸಾಚಿ ತಮ್ಮ ಮೊಬೈಲ್​ನಲ್ಲಿ ಆರೋಪಿಗಳ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ತಮ್ಮಗಾದ ಕುರಿತು ಹೇಳಿಕೊಂಡಿದ್ದಾರೆ.

ದೂರು ದಾಖಲಿಸಲು ನಕಾರ

ಈ ಕುರಿತು ಸಾಚಿ ದೆಹಲಿ ಪೊಲೀಸರಿಗೆ ದುರು ನೀಡಲು ಮುಂದಾದಾಗ ಅಧಿಕಾರಿಗಳು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು ಮತ್ತು ಸುರಕ್ಷಿತವಾಗಿ ಮನೆ ತಲುಪಿದ್ದೀರಲ್ಲ ಬಿಟ್ಟುಬಿಡಿ ಎಂದರು.

ಮುಂದಿನ ಬಾರಿ ಹಿಂಬಾಲಿಸಿದಾಗ ಅವರ ಗಾಡಿ ಸಂಖ್ಯೆಯನ್ನು ನೋಟ್​ ಮಾಡಿಕೊಂಡು ನಮಗೆ ಕೊಡಿ ಮುಮದಿನ ಬಾರಿ ಅವರ ಫೋನ್​ ನಂಬರ್​ಅನ್ನು ತೆಗೆದುಕೊಳ್ಳುತ್ತೇವೆ ಎಂದು ಬೇಜವಾಬ್ದಾರಿತನದಿಂದ ಉತ್ತರ ನೀಡಿದ್ದರು ಎಂದು ಕಿಡಿಕಾರಿದ್ದಾರೆ.

ಆರೋಪಿಗಳ ಬಂಧನ

ಇನ್ನು ಸಾಚಿ ಅವರ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವುಯಾಗಿದ್ದಾರೆ.

ಇನ್ನೋರ್ವ ಆರೋಪಿ ತಲೆಮಾರಿಸಿಕೊಂಡಿದ್ದು ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net