VIDEO: ಅರಬ್​ ರಾಷ್ಟ್ರದ ಸೌಂದರ್ಯಕ್ಕೆ ಮನಸೋತ ಕ್ರಿಕೆಟಿಗರು....

kohli and chahall for uae scene
Published on

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರದ ಸಿದ್ಧತೆ ನಡೆಯುತ್ತಿದೆ. ಕಳೆದ ವಾರಾಂತ್ಯದಲ್ಲಿ ಅರಬ್​ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಆಟಗಾರರು ಇನ್ನು ಒಂದು ವಾರಗಳ ಕಾಲ ಹೋಟೆಲ್​ಗಳಲ್ಲೇ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಎಲ್ಲ ತಂಡಗಳು ದುಬೈ ಹಾಗೂ ಅಬು ಧಾಬಿಯಲ್ಲೇ ಉಳಿದುಕೊಂಡಿವೆ. ಬಹುತೇಕ ತಂಡಗಳು ಸಮುದ್ರದ ತಟದಲ್ಲಿ ರೆಸಾರ್ಟ್​ ಹಾಗೂ ಹೋಟೆಲ್​ಗಳಲ್ಲಿ ತಂಗಿವೆ. ಈ ವೇಳೆ ಅರಬ್​ ನಗರದ ಸುಂದರ ಪ್ರಕೃತಿಯ ಸೊಬಗನ್ನು ಆಟಗಾರರು ಸವಿಯುತ್ತಿದ್ದಾರೆ. ಜತೆಗೆ ಅರಬ್​ ರಾಷ್ಟ್ರದ ಸುಂದರ ಪ್ರಕೃತಿಯನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದ್ದಾರೆ.

ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ, ಬಿಚ್​ ತಟದಲ್ಲಿರುವ ಹೋಟೇಲ್​ ಕೊಠಡಿಯಿಂದ ಹೊರಬಂದು ಪೋಸ್​ ನೀಡಿದರೆ, ಸ್ಪಿನ್ನರ್​ ಯಜುವೇಂದ್ರ ಚಾಹಲ್​, ಸಿಎಸ್​ಕೆ ಆಟಗಾರ ಸುರೇಶ್​ ರೈನಾ ಸೇರಿದಂತೆ ಇತರ ಆಟಗಾರರು ದುಬೈ ಸುಂದರ ಪ್ರಕೃತಿಗೆ ಮನ ಸೋತಿದ್ದಾರೆ. ಪೋಸ್​ ಕೊಡಲು ಉತ್ತಮ ಸ್ಥಳ ಎಂದು ಚಾಹಲ್​ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಹೋಟೆಲ್​ ಬಾಲ್ಕನಿಯಲ್ಲಿ ನಿಂತು ಬೀಚ್​ ಕಡೆಗೆ ಪೋಸ್​ ನೀಡಿದ್ದಾರೆ. ಪ್ರತಿಷ್ಠಿತ ಭುಜ್​ ಖಲೀಫಾ ಟವರ್​ಗೆ ಹೊಂದಿಕೊಂಡಂತೆ ಇರುವ ತಾಜ್​ ದುಬೈ ಹೋಟೆಲ್​ನಲ್ಲಿ ಸಿಎಸ್​ಕೆ ತಂಡ ಉಳಿದಿದ್ದು, ಖಲೀಫಾ ಟವರ್​ ಅನ್ನು ರೈನಾ ಸೆರೆಹಿಡಿದಿದ್ದಾರೆ.

ಆಟಗಾರರು ಹೋಟೆಲ್​ನಲ್ಲೇ ಫಿಟ್ನೆಸ್​ ಹಾಗೂ ದೈಹಿಕ ಕಸರತ್ತಿನ ಮೊರೆ ಹೋಗಿದ್ದು, ಮುಂದಿನ 5 ದಿನಗಳ ಕಾಲ ಹೋಟೆಲ್​ ಆವರಣದಲ್ಲಿ ಹಾಗೂ ಕೊಠಡಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಸೆ.19 ರಿಂದ ನವೆಂಬರ್​ 10ರವರೆಗೆ 13ನೇ ಐಪಿಎಲ್​ ನಡೆಯಲಿದ್ದು, ಟೂರ್ನಿ ಅಂತಿಮ ವೇಳಾಪಟ್ಟಿ ಇನ್ನಷ್ಟೇ ಪ್ರಕಟಿಸಬೇಕಿದೆ. ಯುಎಇಯ ಮೂರು ನಗರಗಳಾದ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net