

ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಮಿಂಚುವ ಪ್ರತಿಯೊಬ್ಬ ಆಟಗಾರನೂ ಯಾವ ಸೆಲೆಬ್ರಿಟಿಗಳಿಗೇನು ಕಮ್ಮಿಯಿಲ್ಲ. ಅದರಲ್ಲೂ ಐಪಿಎಲ್ ಶುರುವಾರ ಮೇಲೆ ಆಟಗಾರರಿಗೆ ಡಿಮ್ಯಾಂಡ್ ಕೂಡ ಅಷ್ಟೇ ಹೆಚ್ಚಾಗಿದೆ. ಭಾನುವಾರವಷ್ಟೇ ಹಾರ್ದಿಕ್ ಪಾಂಡ್ಯ ಅಪ್ಪನಾಗುತ್ತಿರುವ ವಿಷಯ ಬಹಿರಂಗಪಡಿಸಿದರು. ಮದುವೆಗೂ ಮುಂಚೆಯೇ ಪಾಂಡ್ಯ ಅಪ್ಪನಾಗುತ್ತಿದ್ದಾರೆ. ಇದಕ್ಕೂ ಮೊದಲು ಮದುವೆಗೂ ಮುಂಚೆಯೇ ಅಪ್ಪನಾದ ಕೆಲ ಕ್ರಿಕೆಟಿಗರಿದ್ದಾರೆ. ಅವರೆಂದರೆ, ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದಂತ ಕಥೆಗಳಾದ ಸರ್ ವಿವಿಯನ್ ರಿಚರ್ಡ್ಸ್, ಕ್ರಿಸ್ ಗೇಲ್, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಜೋ ರೂಟ್, ಭಾರತದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಈ ಸಾಲಿಗೆ ನಿಲ್ಲುತ್ತಾರೆ.
ಇದನ್ನೂ ಓದಿ:ಅಮ್ಮನಾಗುತ್ತಿದ್ದಾರೆ ಟೆನಿಸ್ ತಾರೆ ಬಾರ್ತೋಲಿ
ಭಾರತೀಯ ಕ್ರಿಕೆಟ್‌ನಲ್ಲಿ ಬ್ಯಾಡ್ ಬಾಯ್ ಎನಿಸಿಕೊಂಡ ವಿನೋದ್ ಕಾಂಬ್ಳಿ ಕೂಡ ಇವರ ಸಾಲಿನಲ್ಲಿ ನಿಲ್ಲುತ್ತಾರೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಮಾಡೆಲ್ ಅಂಡ್ರಿಯಾ ಹೆವಿಟ್‌ರನ್ನು ಮದುವೆಯಾದರು. ಮದುವೆಗೂ ಮುಂಚೆಯೇ ಈ ಜೋಡಿಗೆ ಗಂಡು ಮಗುವಿನ ಜನನವಾಗಿತ್ತು.