ಕ್ರಿಕೆಟರ್​ ಶೇನ್​ ವಾರ್ನ್​ ಸಾವಿನ ರಹಸ್ಯ ಮುಚ್ಚಿ ಹಾಕೋ ಯತ್ನ; ಮಾದಕ ದ್ರವ್ಯ ಬಳಸಿದ ಶಂಕೆ! Shane Warne

shane warn
Published on

Shane Warne | ಆಸ್ಟ್ರೇಲಿಯಾ ಕ್ರಿಕೆಟರ್​ ಶೇನ್ ವಾರ್ನ್ ಅವರ ಸಾವಿನ ಬಗ್ಗೆ ಮಹತ್ವದ ಸುಳಿವೊಂದು ಸಿಕ್ಕಿದೆ. ಅವರ ವಿಲ್ಲಾದಲ್ಲಿ ಕಾಮಗ್ರಾ ಮಾತ್ರೆ ಬಾಟಲಿ ಸಿಕ್ಕಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಕ್ರಿಕೆಟಿಗ ಶೇನ್ ವಾರ್ನ್ ಅವರು ಥೈಲ್ಯಾಂಡ್‌ನ ವಿಲ್ಲಾದಲ್ಲಿ 2022 ಮರ್ಚ್​ ರಂದು ನಿಧನರಾಗಿದ್ದರು. ಇದೀಗ ಶೇನ್ ವಾರ್ನ್ ಸಾವಿನ ನಂತರ ಅವರ ವಿಲ್ಲಾದಿಂದ ಲೈಂಗಿಕ ಮಾದಕ ವಸ್ತುವನ್ನು ಹೊರ ತೆಗೆದುಹಾಕಲಾಗಿದೆ.

3 ವರ್ಷಗಳ ಹಿಂದೆ ಶೇನ್ ವಾರ್ನ್ ಶವವಾಗಿ ಸಿಕ್ಕಾಗ ಇಡೀ ಕ್ರಿಕೆಟ್ ಜಗತ್ತು ದಿಗ್ಭ್ರಮೆಗೊಂಡಿತ್ತು. ಆದರೆ ಇದೀಗ ಅವರು ವಾಸವಿದ್ದ ಕೋಣೆಯಲ್ಲಿ ಲೈಂಗಿಕ ಮಾದಕ ವಸ್ತು ದೊರೆತಿದೆ ಎಂಬ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ. ಶೇನ್ ವಾರ್ನ್ ಸಾವಿನ ರಹಸ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆಯೇ ಎಂಬ ಬಗ್ಗೆ ಇದೀಗ ಅನುಮಾನಗಳು ಹುಟ್ಟಿಕೊಂಡಿವೆ. ಶೇನ್ ವಾರ್ನ್ ನಿಗೂಢ ಸಾವಿನ ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅವರು ಸಾವಿಗೀಡಾಗಿದ್ದ ಕೋಣೆಯಲ್ಲಿ ಸಿಕ್ಕ ಮಾತ್ರೆಗಳ ಬಾಟಲಿಯನ್ನು ಯಾರಿಗೂ ತಿಳಿಯದಂತೆ ಎತ್ತಿಡಲು ಮತ್ತು ಸಾಕ್ಷ್ಯ ನಾಶಪಡಿಸಲು ಆದೇಶ ಮಾಡಿದ್ದರು ಎಂದು ಆರೋಪಿಸಿದ್ದಾರೆ.

Death Case

ಕೋಣೆಯಲ್ಲಿ ಸಿಕ್ಕ ವಸ್ತು ಏನು?

ಶೇನ್ ವಾರ್ನ್ ಸಾವಿನ ರಹಸ್ಯ ಪತ್ತೆ ಹಚ್ಚಲು ತನಿಖೆಯಲ್ಲಿ ಭಾಗಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ವಾರ್ನ್ ಸಾವನ್ನಪ್ಪಿದ್ದ ಕೋಣೆಯಿಂದ ಕಾಮಾಗ್ರ ಎಂಬ ಹೆಸರಿನ ಮಾತ್ರೆಗಳ ಬಾಟಲಿಯನ್ನು ತೆಗೆದು ಹಾಕಲು ಆದೇಶಿಸಲಾಗಿತ್ತು. ಆ ಮಾತ್ರೆಯನ್ನು ನಿಮಿರುವಿಕೆಯ ದೌರ್ಬಲ್ಯಕ್ಕೆ ಬಳಸುತ್ತಾರೆ. ಒಂದು ವೇಳೆ ಹೃದಯ ದೌರ್ಬಲ್ಯ ಸಮಸ್ಯೆ ಇರುವವರು ಇದನ್ನು ಬಳಸಿದರೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಈ ಔಷಧವು ವಯಾಗ್ರದಲ್ಲಿ ಕಂಡುಬರುವ ಸಿಲ್ಡೆನಾಫಿಲ್ ಸಿಟ್ರೇಟ್ ಅನ್ನು ಒಳಗೊಂಡಿದೆ. ಇದನ್ನು ನಾನು ಕೋಣೆಯಿಂದ ಸಂಗ್ರಹಿಸಿದಾಗ ಹಿರಿಯ ಅಧಿಕಾರಿಗಳು ಮಾತ್ರೆಗಳ ಬಾಟಲಿಯ ರಹಸ್ಯವನ್ನು ಹೊರ ತರದಂತೆ ಆದೇಶಿಸಿದರು. ಈ ತಿರುಚುವಿಕೆಯಲ್ಲಿ ಆಸ್ಟ್ರೇಲಿಯಾದ ಅಧಿಕಾರಿಗಳು ಭಾಗಿಯಾಗಿರಬಹುದು ಎಂದು ಆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

ನಮ್ಮ ಮೇಲಧಿಕಾರಿಗಳು ಬಾಟಲಿಯನ್ನು ಸಾಗಿಸಲು ನಮಗೆ ಆದೇಶ ನೀಡಿದರು. ಎಲ್ಲಾ ಆದೇಶಗಳು ಮೇಲಧಿಕಾರಿಗಳಿಂದ ಬರುತ್ತಿದ್ದವು, ಇದೆಲ್ಲದರ ಮಧ್ಯೆ ಅವರಿಗೆ ಹೃದಯಾಘಾತವಾಗಿತ್ತು ಎಂದು ಸಾವಿನ ಸಂದರ್ಭದಲ್ಲಿ ವರದಿಯಾಗಿತ್ತು. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಬೇರೆ ಯಾವುದೇ ವಿವರಗಳನ್ನು ನೀಡಿರಲಿಲ್ಲ. ಹಿಂದೆ ಹಲವಾರು ದೊಡ್ಡ ಕೈಗಳಿದ್ದವು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net