

Refrigerator | ನಿಮ್ಮ ಮನೆಯಲ್ಲಿರುವ ಸುಂದರವಾದ ಡಿಸೈನ್ ಹೊಂದಿದ ರೆಫ್ರಿಜರೇಟರ್ಗಳು ಮನೆಯ ಅಂದವನ್ನು ಕಾಪಾಡುತ್ತವೆ ಎಂದರೆ ತಪ್ಪಾಗಲಾರದು. ಫ್ರಿಡ್ಜ್ ಮನೆಯಲ್ಲಿದ್ದರೆ ಸಾಕಷ್ಟು ಉಪಯೋಗವಾಗುತ್ತದೆ. ಹಣ್ಣು, ತರಕಾರಿ ಹಾಗೂ ಇತ್ಯಾದಿ ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ತಾಜಾತನಕ್ಕಾಗಿ ಇದರಲ್ಲಿ ಇರಿಸಬಹುದು. ಆದರೆ ಇಂತಹ ಒಂದು ರೆಫ್ರಿಜರೇಟರ್ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ರೆಫ್ರಿಜರೇಟರ್ನಲ್ಲಿರುವ ಗೀರುಗಳು ಅಥವಾ ಕಲೆಗಳನ್ನು ಶುಚಿಗೊಳಿಸಲು, ಅದಕ್ಕೆ ದುಬಾರಿ ಕ್ಲೀನರ್ಗಳ ಅಗತ್ಯವಿಲ್ಲ. ಬದಲಾಗಿ ಒಂದು ಎಣ್ಣೆಯ ಸಹಾಯದಿಂದ ನೀವು ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಸಾಮಾನ್ಯವಾಗಿ ಧೂಳಿನ ಕಣ ಅಥವಾ ಮಕ್ಕಳ ಉಗುರುಗಳಿಂದ ಫ್ರಿಡ್ಜ್ ಮೇಲೆ ಗುರುತುಗಳು ಉಳಿಯುತ್ತವೆ. ಈ ಕಲೆಗಳು ಫ್ರಿಡ್ಜ್ನ ಸೌಂದರ್ಯ ಮತ್ತು ಹೊಳಪನ್ನು ಕಡಿಮೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಅನೇಕ ಜನರು ಫ್ರಿಡ್ಜ್ನ ಹೊಳಪನ್ನು ಹೆಚ್ಚಿಸಲಿಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಕ್ಲೀನರ್ಗಳನ್ನು ಖರೀದಿ ಮಾಡುತ್ತಾರೆ. ಆದರೆ ಟರ್ಪಂಟೈನ್ ಎಣ್ಣೆಯನ್ನು ಬಳಸುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
7. ಎಣ್ಣೆಯ ಕಲೆಗಳನ್ನು ತೆಗೆದುಹಾಕಲು, ನೀರನ್ನು ಅದ್ದಿದ ತೆಳುವಾದ ಬಟ್ಟೆಯನ್ನು ಬಳಸಿ
6. ಕಲೆ ತೆಗೆದ ನಂತರ, ಸ್ವಚ್ಛವಾದ ಒದ್ದೆಯಾದ ಬಟ್ಟೆಯಿಂದ ಫ್ರಿಡ್ಜ್ ಅನ್ನು ಚೆನ್ನಾಗಿ ಒರೆಸಿ.
5. ಕಲೆ ಹೆಚ್ಚಾಗಿದ್ದರೆ, ಸ್ವಲ್ಪ ಹೆಚ್ಚಿನ ಎಣ್ಣೆಯನ್ನು ಬಳಸಿ ಶುಚಿಗೊಳಿಸಿ
4. ಕಲೆ ಅಥವಾ ಗ್ರೀಸ್ ಹೊರಬರುವಂತೆ ನಿಧಾನವಾಗಿ ಉಜ್ಜಬೇಕು
3. ನಂತರ ರೆಫ್ರಿಜರೇಟರ್ನ ಕಲೆ ಮತ್ತು ಗೀರುಗಳಿರುವ ಜಾಗದಲ್ಲಿ ಉಜ್ಜಬೇಕು
2. ಬಟ್ಟೆಯನ್ನು ತೆಗೆದುಕೊಂಡು ಟರ್ಪಂಟೈನ್ ಎಣ್ಣೆಯಲ್ಲಿ ಅದ್ದಿ ನಂತರ ಚೆನ್ನಾಗಿ ಹಿಂಡಬೇಕು.
1. ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪ ಟರ್ಪಂಟೈನ್ ಎಣ್ಣೆಯನ್ನು ಹಾಕಿಕೊಳ್ಳಿ.
ಫ್ರಿಡ್ಜ್ನಿಂದ ಕಲೆಗಳು ಮತ್ತು ಗೀರುಗಳನ್ನು ತೆಗೆದುಹಾಕಿದ ನಂತರ, ಕೊನೆಯದಾಗಿ ಒಣ ಬಟ್ಟೆಯನ್ನು ತೆಗೆದುಕೊಂಡು ಫ್ರಿಡ್ಜ್ ಅನ್ನು ಚೆನ್ನಾಗಿ ಒರೆಸಿ ಒಣಗಿಸಿ. ಇದರಿಂದ ಯಾವುದೇ ಎಣ್ಣೆಯ ಕುರುಹುಗಳು ಉಳಿಯುವುದಿಲ್ಲ. ಟರ್ಪಂಟೈನ್ ಎಣ್ಣೆಯೊಂದಿಗೆ ಹೊಂದಿಕೊಳ್ಳುವ ಉಕ್ಕು ಅಥವಾ ಪ್ಲಾಸ್ಟಿಕ್ ಮೇಲೆ ಮಾತ್ರ ಟರ್ಪಂಟೈನ್ ಎಣ್ಣೆಯನ್ನು ಬಳಸಬೇಕು. ರೆಫ್ರಿಜರೇಟರ್ನ ಮೇಲ್ಮೈಯಲ್ಲಿ ಬಣ್ಣವಿದ್ದರೆ, ಟರ್ಪಂಟೈನ್ ಎಣ್ಣೆಯನ್ನು ಎಚ್ಚರಿಕೆಯಿಂದ ಬಳಸಬೇಕು. ಏಕೆಂದರೆ ಅದು ಬಣ್ಣವನ್ನು ಹಾನಿಗೊಳಿಸುವ ಸಾಧ್ಯತೆ ಇರುತ್ತದೆ. ನಿಮಗೆ ಸಾಧ್ಯವಾದಾಗ ಅಂದರೆ ವೀಕೆಂಡ್ಗಳಲ್ಲಿ ನಿಮ್ಮ ರೆಫ್ರಿಜರೇಟರ್ ಸ್ವಚ್ಛ ಮಾಡಿ, ಅಲ್ಲದೆ ಹೆಚ್ಚು ದಿನಗಳ ಕಾಲ ಕ್ಲೀನ್ ಮಾಡದೆ ಹೋದರೆ, ರೆಫ್ರಿಜರೇಟರ್ ವಾಸನೆ ಬರುತ್ತದೆ. ಒಂದು ತೇವದ ಬಟ್ಟೆಯಲ್ಲಿ ರೆಫ್ರಿಜರೇಟರ್ ಒಳಭಾಗದಲ್ಲಿ ಎಲ್ಲಾ ಕಡೆ ಉಜ್ಜಿ ಸ್ವಚ್ಛ ಮಾಡುವುದು ಉತ್ತಮ.