

ಮಾಸ್ಕೋ | ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಐಷಾರಾಮಿ 'ಲಿಮೋಸಿನ್' ಕಾರು ಸ್ಫೋಟಗೊಂಡು ಬೆಂಕಿಗಾಹುತಿಯಾಗಿದೆ. ಮಾಸ್ಕೋದಲ್ಲಿರುವ ಎಫ್ಎಸ್ಬಿ ಪ್ರಧಾನ ಕಚೇರಿಯ ಹೊರಗೆ ಈ ಸ್ಫೋಟ ಸಂಭವಿಸಿದೆ. ದೊಡ್ಡ ಪ್ರಮಾಣದಲ್ಲಿ ಸ್ಪೋಟ ಸಂಭವಿಸಿದ್ದು, ನಂತರ ಕಾರಿನ ಎಂಜಿನ್ನಿಂದ ಹೊತ್ತಿದ ಬೆಂಕಿ, ಸಂಪೂರ್ಣ ಕಾರನ್ನು ಆವರಿಸಿದ ಪರಿಣಾಮ ಇಡೀ ಕಾರು ಹಾನಿಗೊಳಗಾಗಿದೆ.
ಲಿಮೋಸಿನ್ ಕಾರು ಐಷಾರಾಮಿ ಹಾಗೂ ಉದ್ದವಾದ ಚಕ್ರ ಹೊಂದಿರುವ ವಾಹನವಾಗಿದ್ದು, ಈ ಕಾರನ್ನು ಹಲವು ದೇಶಗಳ ಅಧ್ಯಕ್ಷರು ಬಳಸುತ್ತಾರೆ. ಇದು ಪ್ರಯಾಣಿಕ ಹಾಗೂ ಚಾಲಕರ ನಡುವೆ ವಿಭಜನೆಯನ್ನು ಹೊಂದಿರುತ್ತದೆ. ಆರಾಮದಾಯಕ ಮತ್ತು ಐಷಾರಾಮಿ ಪ್ರಯಾಣಕ್ಕಾಗಿ ಈ ಕಾರನ್ನ ವಿನ್ಯಾಸ ಮಾಡಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಮಾತ್ರ ಈ ಕಾರನ್ನು ಬಳಕೆ ಮಾಡಲಾಗುತ್ತದೆ.