

ಬೆಂಗಳೂರು: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟ್ಯಾನ್ಕೋವಿಕ್ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಈ ಜೋಡಿ ಶೀಘ್ರವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಕರೊನಾ ವೈರಸ್ ಭೀತಿಯಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಚಟುವಟಿಕೆಯಿಂದ ದೂರವಿದ್ದಾರೆ. ಇದರ ಬೇಸರ ಕಳೆಯಲು ಪಾಂಡ್ಯಗೆ ಇನ್ಸ್ಟಾಗ್ರಾಂ ಪ್ರಮುಖ ಅಸ್ತ್ರವಾಗಿದೆ. ಮೂರು ಮುದ್ದು ನಾಯಿ ಮರಿಗಳನ್ನು ಖರೀದಿಸಿರುವ ಹಾರ್ದಿಕ್ ಪಾಂಡ್ಯ, ಇಸ್ಟಾಗ್ರಾಂನಲ್ಲಿ ಪತ್ನಿ ನತಾಶಾ ಅವರನ್ನು ಕಾಲ ಮೇಲೆ ಮಲಗಿಸಿಕೊಂಡು, ನಾಯಿ ಮರಿಗಳ ಚಿತ್ರದೊಂದಿಗೆ ಫ್ಯಾಮಿಲಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ ಆಯೋಜಿಸಲು ಸಜ್ಜಾಗಿದೆ ಯುಎಇ..!
ಪತ್ನಿ ನತಾಶಾಗಾಗಿ ಮುದ್ದು ನಾಯಿಮರಿಗಳನ್ನು ಖರೀದಿಸಿರುವ ಹಾರ್ದಿಕ್ ಪಾಂಡ್ಯ, ಗರ್ಭಿಣಿ ಪತ್ನಿಯನ್ನು ಖುಷಿಯಿಂದ ಇಡಲು ಪ್ರಯತ್ನಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಜತೆಗೂಡಿ ಜುಲೈ 7 ರಂದು ಎಂಎಸ್ ಧೋನಿ ಜನ್ಮದಿನಕ್ಕೆ ಶುಭಾಶಯ ಕೋರಲು ರಾಂಚಿಗೆ ತೆರಳಿದ್ದರು.