2026ರ ಐಪಿಎಲ್ ಸೀಸನ್‌ನಲ್ಲಿ ಬರೋಬ್ಬರಿ 28 ವಿಕೆಟ್‌ಗಳನ್ನುಪಡೆದುಕೊಂಡು ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಹೊರಗಿಟ್ಟಿರುವುದಕ್ಕೆ ಸದಗೊಪ್ಪನ್ ರಮೇಶ್ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭುವನೇಶ್ವರ್ ಅವರಂತಹ ಹಿರಿಯ ಬೌಲರ್‌ಗೆ ಕೋಕ್ ನೀಡಿ, ಐಪಿಎಲ್ ವಿಕೆಟ್ ಬೇಟೆಯ ಪಟ್ಟಿಯಲ್ಲಿ ಕ್ರಮವಾಗಿ 47, 55 ಮತ್ತು 89ನೇ ಸ್ಥಾನಗಳಲ್ಲಿರುವ ಹರ್ಷ ದುಬೆ, ಅಶೋಕ್ ಶರ್ಮಾ ಮತ್ತು ಯಶ್ ಠಾಕೂರ್ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದ ಮಯಾಂಕ್ ಯಾದವ್ ಅವರನ್ನು ಆಯ್ಕೆ ಮಾಡಿರುವುದರ ವಿರುದ್ಧ ರಮೇಶ್ ಅವರು ಆಕ್ರೋಶ ಹೊರಹಾಕಿದ್ದಾರೆ.