ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿರುವ 'ರೋಕೊ' ಜೋಡಿ, ಕೇವಲ ಏಕದಿನ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಅಂತೆಯೇ, ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ರೋಹಿತ್ ಮತ್ತು ಕೊಹ್ಲಿ, ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಹಾಗೂ ಬಿಸಿಸಿಐ ನಿರೀಕ್ಷೆಗಳನ್ನು ಉಳಿಸಿಕೊಂಡರು. 2027ರ ಏಕದಿನ ವಿಶ್ವಕಪ್ ಆಡಲು ಇಚ್ಛಿಸಿರುವ ರೋಹಿತ್, ಕೊಹ್ಲಿ, ಉತ್ತಮ ಪ್ರದರ್ಶನದತ್ತ ಹೆಚ್ಚು ಗಮನಹರಿಸಿದ್ದಾರೆ. ಅಂತೆಯೇ, ಹುಬ್ಬೇರಿಸುವ ಆಟ ತೋರಿದ್ದಾರೆ. ಆದ್ರೆ, ಹೆಡ್ ಕೋಚ್ ಅವರಿಂದ ಇದಕ್ಕೆ ಅಂತಹ ಮನ್ನಣೆ ಸಿಕ್ಕಿಲ್ಲ ಎಂಬುದು ಸದ್ಯ ದಿಗ್ಗಜ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.