ತಮಿಳು ಓಕೆ, ತೆಲುಗಿನಲ್ಲಿ ಏಕೆ? 2 ಹಿಟ್​ ಚಿತ್ರ ಕೊಟ್ಟಿದ್ದೇ ತಡ 50 ಕೋಟಿ ರೂ. ಸಂಭಾವನೆಗೆ ಬೇಡಿಕೆ​! ಯಾರೀ ಸ್ಟಾರ್​ ನಟ?

ತಮಿಳು ನಟ ಧನುಷ್​
ತಮಿಳು ನಟ ಧನುಷ್​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳಿನ ಸ್ಟಾರ್​ ನಟ ಈಗ ಟಾಲಿವುಡ್​ನಲ್ಲೂ ಹಿಟ್​
  • 2 ಸೂಪರ್​ಹಿಟ್​ ಚಿತ್ರಗಳ ಬೆನ್ನಲ್ಲೇ ಸಂಭಾವನೆ ಹೆಚ್ಚಳ
  • 50 ಕೋಟಿ ರೂ. ಸಂಭಾವನೆಗೆ ಡಿಮಾಂಡ್​
ತಮಿಳುನಾಡು: ಕಳೆದ ಕೆಲವು ತಿಂಗಳಿನಿಂದ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಸಂಪ್ರದಾಯ ಆರಂಭವಾಗಿದೆ. ಅಂದರೆ, ಈ ಹಿಂದೆ ಒಂದೆರೆಡು ಅಥವಾ ತಮ್ಮ ಭಾಷೆಯ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ನಟ, ನಟಿಯರು ಈಗ ಆ ಚೌಕಟ್ಟನ್ನು ಮೀರಿ, ಹಲವು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಭಿನಯದ ಜತೆ ಜತೆಗೆ ಅಲ್ಲಿನ ಅಭಿಮಾನಿಗಳ ಪ್ರೀತಿ, ಅಭಿಮಾನವನ್ನೂ ಸಂಪಾದಿಸುತ್ತಿದ್ದಾರೆ. ಇದು ಆಯಾ ನಟರ ಅಭಿಮಾನಿ ಬಳಗ ಮತ್ತು ಸಂಭಾವನೆಯನ್ನು ದ್ವಿಗುಣಗೊಳಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿಯೇ. ಆದರೆ, ಸಂಭಾವನೆ ವಿಷಯ ಅಂತ ಬಂದಾಗ ನಿರ್ಮಾಪಕರಿಗೆ ಉಂಟಾಗುವ ತಲೆನೋವು ಮಾತ್ರ ವಿವರಿಸುವುದು ಕಷ್ಟಸಾಧ್ಯ.
ಮುಖ್ಯವಾಗಿ, ತೆಲುಗು ಹೀರೋಗಳು ತಮಿಳಿನಲ್ಲಿ ನಟಿಸಲು ಆಸಕ್ತಿ ತೋರಿಸುತ್ತಿದ್ದರೆ, ತಮಿಳು ಸ್ಟಾರ್​ಗಳು ತೆಲುಗಿಗೆ ಎಂಟ್ರಿ ಕೊಡಲು ಆಸಕ್ತಿ ತೋರುತ್ತಿದ್ದಾರೆ. ಇದು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುತ್ತಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆಯಾ ಕಲಾವಿದರು ನಟಿಸಿದ ಸಿನಿಮಾ ಹಿಟ್ ಆದ್ರೆ ಸಾಕು ಅವರವರ ಸಂಭಾವನೆ ಒಂದು ಪಟ್ಟು ಹೆಚ್ಚುತ್ತದೆ. ಇತ್ತೀಚೆಗೆ, ಕಾಲಿವುಡ್​ನ ಈ ಸ್ಟಾರ್ ನಟ ಕೂಡ ತಮ್ಮ ಪೇಮೆಂಟ್​ ಮೊತ್ತವನ್ನು ತೆಲುಗಿನಲ್ಲಿ ದುಪ್ಪಟ್ಟು ಮಾಡಿಕೊಂಡಿರುವುದಾಗಿ ಸಿನಿ ವರದಿ ತಿಳಿಸಿದೆ.
ಆ ನಟ ಬೇರಾರು ಅಲ್ಲ ಧನುಷ್. ಇತ್ತೀಚೆಗಷ್ಟೇ, ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿರುವ ಅವರು, 'ಸಾರ್' ಮತ್ತು 'ಕುಬೇರ' ಸೂಪರ್​ಹಿಟ್​ ಮೂಲಕ ನಿರ್ಮಾಪಕರ ಜೇಬು ತುಂಬಿಸಿದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಎರಡೂ ಚಿತ್ರಗಳು ಬ್ಲಾಕ್ಬಸ್ಟರ್ ಚಿತ್ರಗಳ ಪಟ್ಟಿಗೆ ಸೇರಿವೆ. ಇವೆರೆಡು ಸಿನಿಮಾಗಳು 100 ಕೋಟಿ ರೂ.ಗೂ ಅಧಿಕ ಲಾಭ ಗಳಿಸಿವೆ. ಹೀಗಾಗಿಯೇ, ತೆಲುಗು ನಿರ್ಮಾಪಕರು ಧನುಷ್ ಅವರೊಂದಿಗೆ ಸಿನಿಮಾ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಮತ್ತೊಂದೆಡೆ, ಹೆಸರಾಂತ ನಿರ್ಮಾಪಕರೊಬ್ಬರು ತಮ್ಮ ಮುಂದಿನ ಚಿತ್ರಕ್ಕೆ ಧನುಷ್ ಅವರನ್ನು ನಾಯಕನಾಗಿ ನಿರ್ಧರಿಸಿದ್ದು, ಕಥೆ ಹೇಳಲು ಚೆನ್ನೈಗೆ ತೆರಳಿದ್ದರಂತೆ.
ಕಥೆಗೆ ಓಕೆ ಮಾಡಿದ ಧನುಷ್​, ತೆಲುಗಿನಲ್ಲಿ ಮತ್ತೊಂದು ಸಿನಿಮಾ ಮಾಡುವುದಾದರೆ ನನ್ನ ಸಂಭಾವನೆ 50 ಕೋಟಿ ರೂ. ಎಂದು ನಿರ್ಮಾಪಕರಿಗೆ ತಿಳಿಸಿದ್ದಾಗಿ ವರದಿಯಾಗಿದೆ. ನಟನ ಡಿಮಾಂಡ್​ ಸದ್ಯ ಪ್ರೊಡ್ಯೂಸರ್​ಗೆ ತೀವ್ರ ಅಸಮಾಧಾನ ತಂದಿದೆ ಎನ್ನಲಾಗಿದೆ. 'ಸರ್' ಮತ್ತು 'ಕುಬೇರ' ಚಿತ್ರಗಳಿಗೆ ಧನುಷ್ ಕೇವಲ 30 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ, ಈಗ ತೆಲುಗಿನಲ್ಲಿ ಎರಡು ಹಿಟ್ ಸಿನಿಮಾಗಳ ನಂತರ 50 ಕೋಟಿ ರೂ.ಗೆ ಪೇಮೆಂಟ್​ ಹೆಚ್ಚಿಸಿಕೊಂಡಿರುವುದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ಬೇಸರಕ್ಕೆ ಕಾರಣವಾಗಿದೆ.
ಅಷ್ಟಕ್ಕೂ ಇದು ಯಾವ ಚಿತ್ರಕ್ಕೆ? ಯಾರು ಆ ನಿರ್ಮಾಪಕರು ಎಂಬುದು ಸ್ಪಷ್ಟವಾಗಿಲ್ಲ. ಅಷ್ಟಕ್ಕೂ, ಧನುಷ್​ ಹೇಳಿದ ಸಂಭಾವನೆಯನ್ನು ಆ ನಿರ್ಮಾಪಕರು ಒಪ್ಪುತ್ತಾರೋ ಅಥವಾ ಬೇರೆ ನಾಯಕನನ್ನು ಆಯ್ಕೆ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net