ಇನ್ಸ್ಟಾದಲ್ಲಿ ಕ್ಯೂಟ್ ಎಂದ ಯುಜಿ? ನನ್ನೊಬ್ಬಳನ್ನೇ ಏಕೆ ಟ್ರೋಲ್ ಮಾಡುತ್ತಿರಾ ಎಂದ ತಾನಿಯಾ; ಮಾನನಷ್ಟ ಮೊಕದ್ದಮೆ ದಾಖಲಿಸಿದ ಚಹಲ್! Yuzvendra Chahal
ತಾನಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಯಜುವೇಂದರ್ ಚಹಲ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯೂಟ್ ಎಂದು ಮೆಸೇಜ್ ಮಾಡಿದ್ದ ಯುಜಿ
ನಾನು ಸತ್ಯವನ್ನು ಹೇಳಿದರೂ ಜನ ನನ್ನನ್ನೇ ಟ್ರೋಲ್ ಮಾಡುತ್ತಿದ್ದಾರೆ ಎಂದ ತಾನಿಯಾ ಚಟರ್ಜಿ
ತಾನಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಯಜುವೇಂದರ್ ಚಹಲ್
ವೈರಲ್: ಭಾರತೀಯ ಪುರುಷ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಲ್ (Yuzvendra Chahal) ಕೇವಲ ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೂ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಆದರೆ ಈ ಬಾರಿ ಅವರು ತಮ್ಮ ಸ್ಪಿನ್ ಮೋಡಿಯ ಬದಲಾಗಿ ನಟಿ ತಾನಿಯಾ ಚಟರ್ಜಿ ಎಂಬುವವರು ನೀಡಿದ ಒಂದು ಹೇಳಿಕೆಯಿಂದಾಗಿ ಭಾರೀ ಚರ್ಚೆಯಲ್ಲಿದ್ದಾರೆ.
ಕ್ಯೂಟ್ ಅಂತ ಮೆಸೇಜ್ ಕಳುಹಿಸಿದ್ರಾ ಯುಜಿ?
OTT ಸರಣಿಗಳು ಹಾಗೂ ಬೋಲ್ಡ್ ವಿಡಿಯೋಗಳ ಮೂಲಕ ಫೇಮಸ್ ಆಗಿರುವ ನಟಿ ತಾನಿಯಾ ಚಟರ್ಜಿ, ಚಹಲ್ ತಮಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದರು ಎಂದು ಬಾಂಬ್ ಸಿಡಿಸಿದ್ದರು. ಚಹಲ್ ನನಗೆ ನೀವು ತುಂಬಾ ಕ್ಯೂಟ್ ಆಗಿದ್ದೀರಿ ಅಂತ ಮೆಸೇಜ್ ಕಳುಹಿಸಿದ್ದರು ಎಂದು ತಾನಿಯಾ ಹೇಳಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.
ಚಹಲ್ ಅವರಂತಹ ಒಬ್ಬ ಸ್ಟಾರ್ ಕ್ರಿಕೆಟಿಗ ಹೀಗೆ ಮೆಸೇಜ್ ಮಾಡಿದ್ದಾರಾ? ಎಂದು ನೆಟ್ಟಿಗರು ಕಣ್ಣರಳಿಸಿ ನೋಡುತ್ತಲೇ ಇತ್ತ ಚಾಹಲ್ ಸುಮ್ಮನೆ ಕುಳಿತಿಲ್ಲ, ಈ ಆರೋಪದಿಂದ ತಮ್ಮ ಹೆಸರಿಗೆ ಮಸಿ ಬಳಿಯಲಾಗಿದೆ ಎಂದು ಅವರು ತಾನಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Case) ಹೂಡಿದ್ದಾರೆ.
ನನ್ನನ್ನೇ ಯಾಕೆ ಟ್ರೋಲ್ ಮಾಡ್ತಿದ್ದೀರಾ? ಕಣ್ಣೀರು ಹಾಕಿದ ನಟಿ
ತಮ್ಮ ವಿರುದ್ಧ ಕೇಸ್ ದಾಖಲಾದ ನಂತರ ಪಾಪರಾಜಿಗಳ ಮುಂದೆ ಕಾಣಿಸಿಕೊಂಡ ತಾನಿಯಾ ಸಖತ್ ಗರಂ ಆಗಿದ್ದಾರೆ. ನಾನು ಇಷ್ಟೊಂದು ವೈರಲ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈಗ ಎಲ್ಲರೂ ನನ್ನನ್ನೇ ಟ್ರೋಲ್ ಮಾಡುತ್ತಿದ್ದಾರೆ, ನನ್ನ ಮರ್ಯಾದೆ ಹೋಗುತ್ತಿದೆ. ಆದರೆ ಯುಜಿಯನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಹಲ್ ಹೂಡಿರುವ ಕೇಸ್ ಅನ್ನು ಹಾಸ್ಯಾಸ್ಪದ ಮತ್ತು ಮೂರ್ಖತನ ಎಂದು ಕರೆದಿರುವ ತಾನಿಯಾ, ನಾನೇನೂ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಹೋಗಿಲ್ಲ. ಅವರ ಮೇಲೆ ನನಗೆ ಗೌರವವಿದೆ, ಅವರು ದೇಶದ ಹೆಮ್ಮೆ. ಆದರೆ ಅವರು ನನಗೆ ಮೆಸೇಜ್ ಮಾಡಿದ್ದು ನಿಜ, ಅದನ್ನೇ ನಾನು ಹೇಳಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆಯೂ ಚಾಹಲ್ ಸುತ್ತ ವದಂತಿಗಳ ಹುತ್ತ!
ಯುಜ್ವೇಂದ್ರ ಚಾಹಲ್ ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಾಗುವುದು ಇದೇ ಮೊದಲೇನಲ್ಲ. ಧನಶ್ರೀ ವರ್ಮಾ ಜೊತೆಗಿನ ವಿಚ್ಛೇದನದ ವದಂತಿಗಳು ಇಡೀ ದೇಶಾದ್ಯಂತ ಸದ್ದು ಮಾಡಿದ್ದವು. ಆರ್‌ಜೆ ಮಹ್ವಾಶ್ ಮತ್ತು ಶೆಫಾಲಿ ಬಗ್ಗಾ ಅವರ ಹೆಸರಿನ ಜೊತೆಗೂ ಚಹಲ್ ಹೆಸರು ಈ ಹಿಂದೆ ತಳುಕು ಹಾಕಿಕೊಂಡಿತ್ತು. ಈಗ ತಾನಿಯಾ ಪ್ರಕರಣ ಹೊಸ ತಿರುವು ಪಡೆದಿದೆ.
ತಾನಿಯಾ ಹೇಳುವ ಪ್ರಕಾರ, ಅವರ ಹೇಳಿಕೆ ವೈರಲ್ ಆದ ಕೂಡಲೇ ಚಾಹಲ್ ಅವರ PR ತಂಡವು ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಅವರಿಗೆ ಕೇಳಿಕೊಂಡಿತ್ತಂತೆ. ಆದರೆ ಈಗ ಪ್ರಕರಣ ಕೋರ್ಟ್ ಮೆಟ್ಟಿಲೇರಿರುವುದರಿಂದ ಇದು ಸುಲಭವಾಗಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.
ನೆಟ್ಟಿಗರಿಂದ ಕಮೆಂಟ್ ವಾರ್!
ಸೋಷಿಯಲ್ ಮೀಡಿಯಾದಲ್ಲಿ ಈಗ ಯುದ್ಧವೇ ನಡೆಯುತ್ತಿದೆ. ಒಂದು ಕಡೆ ಚಾಹಲ್ ಅಭಿಮಾನಿಗಳು ಇದೆಲ್ಲಾ ಪಬ್ಲಿಸಿಟಿ ಗಿಮಿಕ್, ನಟಿ ಫೇಮಸ್ ಆಗಲು ಹೀಗೆ ಮಾಡುತ್ತಿದ್ದಾರೆ ಎನ್ನುತ್ತಿದ್ದರೆ, ಇನ್ನೊಂದು ಕಡೆ ಚಹಲ್ ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸುತ್ತಿದ್ದಾರೆ,(ಏಜನ್ಸೀಸ್).