ಕೊನೆಯದಾಗಿ, ವೈಭವ್ ಸೂರ್ಯವಂಶಿಗೆ ಒಂದು ಪ್ರಮುಖ ಕಿವಿಮಾತು ಹೇಳಿರುವ ಶ್ರೀಶಾಂತ್, ಸದಾ ಸರಳವಾಗಿರುವಂತೆ ಮತ್ತು ಮೈದಾನದ ಹೊರಗಿನ ವ್ಯವಹಾರಗಳನ್ನು ಕುಟುಂಬದವರಿಗೇ ಬಿಟ್ಟುಬಿಡಲು ಸಲಹೆ ನೀಡಿದ್ದಾರೆ. ವೈಭವ್, ನೀನೇನಾದರೂ ಇದನ್ನು ನೋಡುತ್ತಿದ್ದರೆ, ನನ್ನದೊಂದು ವಿನಂತಿ, ಈ ಪ್ರೊಫೆಷನಲ್ ಮ್ಯಾನೇಜರ್‌ಗಳನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಕೇವಲ ನಿನ್ನ ಆಟದ ಕಡೆಗೆ ಮಾತ್ರ ಗಮನ ಹರಿಸು, ಉಳಿದ ಎಲ್ಲಾ ವಿಷಯಗಳನ್ನು ನಿನ್ನ ತಂದೆ ಮತ್ತು ಕುಟುಂಬದ ಸದಸ್ಯರೇ ನಿಭಾಯಿಸುತ್ತಾರೆ, ಅವರಿಂದ ದೂರವಿರು ಎಂದು ಶ್ರೀಶಾಂತ್ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ, (ಏಜೆನ್ಸೀಸ್).