ಅದೇ ಎಸೆತ, ಅದೇ ತಪ್ಪು... ಬಯಲಾಯ್ತು ವಂಡರ್ ಕಿಡ್ ವೈಭವ್​ ಸೂರ್ಯವಂಶಿ ಬ್ಯಾಟಿಂಗ್​ ವೀಕ್‌ನೆಸ್! Vaibhav Sooryavanshi

ಅದೇ ಎಸೆತ, ಅದೇ ತಪ್ಪು... ಬಯಲಾಯ್ತು ವಂಡರ್ ಕಿಡ್ ವೈಭವ್​ ಸೂರ್ಯವಂಶಿ ಬ್ಯಾಟಿಂಗ್​ ವೀಕ್‌ನೆಸ್! Vaibhav Sooryavanshi
ಅದೇ ಎಸೆತ, ಅದೇ ತಪ್ಪು... ಬಯಲಾಯ್ತು ವಂಡರ್ ಕಿಡ್ ವೈಭವ್​ ಸೂರ್ಯವಂಶಿ ಬ್ಯಾಟಿಂಗ್​ ವೀಕ್‌ನೆಸ್! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಅಂತ ಬಂದಾಗ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಒಂದೇ ಒಂದು ಹೆಸರೆಂದರೆ ಅದು ವೈಭವ್​ ಸೂರ್ಯವಂಶಿ
  • ಕೇವಲ 15 ವರ್ಷದ ಈ ಬಾಲಕ, ಭಾರತೀಯ ಕ್ರಿಕೆಟ್​ನ​ ಭವಿಷ್ಯ ಎಂದರೆ ತಪ್ಪಾಗಲಾರದು
  • ತನ್ನ ಬಿರುಗಾಳಿಯ ಬ್ಯಾಟಿಂಗ್​ನಿಂದಾಗಿ ರನ್​ ಮಳೆಯನ್ನೇ ಹರಿಸುತ್ತಿರುವ ವೈಭವ್​ ಇದೀಗ ಎಲ್ಲರ ಫೇವರಿಟ್​
  • ಇದೆಲ್ಲದರ ನಡುವೆ ವೈಭವ್​ ಅವರ ಬ್ಯಾಟಿಂಗ್​ನ ಸಣ್ಣ ದೌರ್ಬಲ್ಯವೊಂದು ಇದೀಗ ಹೆಚ್ಚು ಚರ್ಚೆಯಾಗುತ್ತಿದೆ
Vaibhav Sooryavanshi : ಕ್ರಿಕೆಟ್ ಅಂತ ಬಂದಾಗ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಒಂದೇ ಒಂದು ಹೆಸರೆಂದರೆ ಅದು ವೈಭವ್​ ಸೂರ್ಯವಂಶಿ. ಕೇವಲ 15 ವರ್ಷದ ಈ ಬಾಲಕ, ಭಾರತೀಯ ಕ್ರಿಕೆಟ್​ನ​ ಭವಿಷ್ಯ ಎಂದರೆ ತಪ್ಪಾಗಲಾರದು. ಏಕೆಂದರೆ, ಈ ಕಿರಿಯ ವಯಸ್ಸಿನಲ್ಲೇ ಆತನ ಸಾಧನೆ ಅಗಾಧ. ತನ್ನ ಬಿರುಗಾಳಿಯ ಬ್ಯಾಟಿಂಗ್​ನಿಂದಾಗಿ ರನ್​ ಮಳೆಯನ್ನೇ ಹರಿಸುತ್ತಿರುವ ವೈಭವ್​, ಜಸ್​ಪ್ರೀತ್​ ಬುಮ್ರಾ, ಜೋಶ್​ ಹ್ಯಾಜಲ್​ವುಡ್​ ಹಾಗೂ ಭುವನೇಶ್ವರ್​ ಕುಮಾರ್​ ಅವರಂತಹ ವಿಶ್ವದರ್ಜೆಯ ಬೌಲರ್​ಗಳನ್ನೇ ತಮ್ಮ ಸುನಾಮಿ ಬ್ಯಾಟಿಂಗ್​ ಮೂಲಕ ಸಮರ್ಥವಾಗಿ ಎದುರಿಸಿದ್ದಾರೆ. ವೈಭವ್​ ಕ್ರೀಸ್​ನಲ್ಲಿ ಇದ್ದರೆ ಅವರಿಗೆ​​ ಬೌಲಿಂಗ್​ ಮಾಡಲು ಬೌಲರ್​ಗಳು ಹೆದರುವಂತಾಗಿದೆ. ಹೀಗಿರುವಾಗ ವೈಭವ್​ ಅವರ ಬ್ಯಾಟಿಂಗ್​ನ ಸಣ್ಣ ದೌರ್ಬಲ್ಯವೊಂದು ಇದೀಗ ಹೆಚ್ಚು ಚರ್ಚೆಯಾಗುತ್ತಿದೆ.
ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ 'ಎ' ವಿರುದ್ಧ ಭಾರತ 'ಎ' ತಂಡದ ಪರ ಕಣಕ್ಕಿಳಿದಿದ್ದ 15 ವರ್ಷದ ಈ ಎಡಗೈ ಬ್ಯಾಟರ್, ತಮ್ಮ ಇನ್ನಿಂಗ್ಸ್‌ನ ಆರಂಭದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದಂತೆ ಕಂಡರು. ಕ್ರೀಸ್‌ನಲ್ಲಿ ಎದುರಿಸಿದ ಕೇವಲ 22 ಎಸೆತಗಳಲ್ಲಿ ಭರ್ಜರಿ 9 ಬೌಂಡರಿಗಳನ್ನು ಚಚ್ಚಿದ ವೈಭವ್​, ಬಿರುಗಾಳಿಯ ವೇಗದಲ್ಲಿ 44 ರನ್ ಕಲೆಹಾಕಿದರಾದರೂ, ದುರದೃಷ್ಟವಶಾತ್ ಈ ಸ್ಫೋಟಕ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.
ಅಂತಿಮವಾಗಿ ಅಫ್ಘಾನಿಸ್ತಾನ ತಂಡದ ವೇಗಿ ಅಬ್ದುಲ್ಲಾ ಅಹ್ಮದ್‌ಜಾಯ್, ಅಬ್ಬರಿಸುತ್ತಿದ್ದ ಸೂರ್ಯವಂಶಿಯವರ ರನ್ ಬೇಟೆಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ನಾಲ್ಕನೇ ಮತ್ತು ಐದನೇ ಸ್ಟಂಪ್ ಲೈನ್‌ನಲ್ಲಿ ಬಂದ ಶಾರ್ಟ್ ಪಿಚ್ ಎಸೆತವು ವೈಭವ್ ಅವರನ್ನು ಅಪಾಯಕಾರಿ ಶಾಟ್‌ಗೆ ಕೈಹಾಕುವಂತೆ ಮಾಡಿತು. ಆಫ್-ಸೈಡ್ ಕಡೆಗೆ ಅತ್ಯಂತ ಕ್ಯಾಶುವಲ್ ಆಗಿ ಹೊಡೆಯಲು ಪ್ರಯತ್ನಿಸಿದರು. ಈ ವೇಳೆ ಚೆಂಡು ಬ್ಯಾಟಿನ ಅಂಚಿಗೆ ಸವರಿಕೊಂಡು ಹೋಗಿ, ವಿಕೆಡ್​ ಕೀಪರ್ ಕೈ ಸೇರಿತು. ಇದರಿಂದ ಔಟಾದ ವೈಭವ್​ ಪೆವಲಿಯನ್​ ಸೇರಿದರು.
ವೈಭವ್​ ಅವರ ಇತ್ತೀಚಿನ ಔಟ್ ಆದ ಶೈಲಿಯು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರ (IPL 2026) ಕೊನೆಯ ಹಂತದಲ್ಲಿ ಅವರು ಎದುರಿಸಿದ್ದ ಅದೇ ಹಳೆಯ ಸಮಸ್ಯೆಯನ್ನು ಮತ್ತೊಮ್ಮೆ ನೆನಪಿಸುವಂತಿತ್ತು. ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸೂರ್ಯವಂಶಿ ಅವರು ಸಾರ್ವಕಾಲಿಕ ಅತ್ಯಂತ ವೇಗದ ಶತಕದ ದಾಖಲೆಯನ್ನು ಮುರಿಯಲು ಕೇವಲ 3 ರನ್‌ಗಳಷ್ಟೇ ಬಾಕಿ ಇದ್ದಾಗ, ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿಗಳು ಅವರ ವಿರುದ್ಧ ಇದೇ ತಂತ್ರವನ್ನು ಬಳಸಿದ್ದರು.
ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹೈದರಾಬಾದ್ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದಾಗ, ಬೌಲರ್‌ಗಳು ಆಫ್-ಸ್ಟಂಪ್‌ನಿಂದ ಹೊರಗಿನ ಶಾರ್ಟ್ ಪಿಚ್ ಎಸೆತಗಳ ಮೂಲಕ ಅವರ ಮೇಲೆ ದಾಳಿ ನಡೆಸಿದ್ದರು. ಆಗ ಆ ಚೆಂಡನ್ನು ಪುಲ್ ಶಾಟ್ ಆಡಲು ಹೋಗಿ ಸೂರ್ಯವಂಶಿ ವಿಕೆಟ್ ಒಪ್ಪಿಸಿದ್ದರು. ಈಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಅದೇ ದೌರ್ಬಲ್ಯ ಎದ್ದು ಕಾಣಸಿದೆ. ಆ ಎಸೆತವು ಹೊಡೆಯಲು ಯೋಗ್ಯವಾಗಿರದಿದ್ದರೂ, ಅವರ ಸಹಜ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಮುನ್ನುಗ್ಗುವಂತೆ ಮಾಡಿದ್ದರಿಂದ ಅವರು ವಿಕೆಟ್ ಕಳೆದುಕೊಳ್ಳಬೇಕಾಯಿತು. ಹೀಗಾಗಿ, ವೈಭವ್​ ಅವರ ಬ್ಯಾಟಿಂಗ್​ ದೌರ್ಬಲ್ಯ ಇದೀಗ ಹೆಚ್ಚು ಚರ್ಚೆಯಾಗುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net