ಅಂದು ಮುಖಕ್ಕೆ ಹೊಡೆದಂತೆ ಪತ್ನಿ ಕೇಳಿದ ಈ ಪ್ರಶ್ನೆಯೇ ಇಂದು ಸೂರ್ಯಕುಮಾರ್ ವಿಶ್ವಕಪ್​ ಗೆಲ್ಲಲು ಕಾರಣವಾಯ್ತು! Suryakumar Yadav

ಅಂದು ಮುಖಕ್ಕೆ ಹೊಡೆದಂತೆ ಪತ್ನಿ ಕೇಳಿದ ಈ ಪ್ರಶ್ನೆಯೇ ಇಂದು ಸೂರ್ಯಕುಮಾರ್ ವಿಶ್ವಕಪ್​ ಗೆಲ್ಲಲು ಕಾರಣವಾಯ್ತು! Suryakumar Yadav
ಅಂದು ಮುಖಕ್ಕೆ ಹೊಡೆದಂತೆ ಪತ್ನಿ ಕೇಳಿದ ಈ ಪ್ರಶ್ನೆಯೇ ಇಂದು ಸೂರ್ಯಕುಮಾರ್ ವಿಶ್ವಕಪ್​ ಗೆಲ್ಲಲು ಕಾರಣವಾಯ್ತು! Suryakumar Yadav
Published on

ಪ್ರಮುಖ ಮುಖ್ಯಾಂಶಗಳು

  • ಪತ್ನಿ ಕೇಳಿದ ಆ ಒಂದು ಪ್ರಶ್ನೆಯಿಂದಲೇ ಸೂರ್ಯಕುಮಾರ್​ ಯಾದವ್​ ಕ್ರಿಕೆಟ್​ ಜೀವನಕ್ಕೆ ಮಹತ್ವದ ತಿರುವು
  • ಆ ಮಾತಿನ ಬಳಿಕ ಶಿಸ್ತುಬದ್ಧ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಂಡೆ ಎಂದ ಸ್ಕೈ
  • ಆಹಾರ ಪದ್ಧತಿ, ಸ್ನೇಹಿತರ ಗುಂಪು, ವೀಕೆಂಡ್​ ಮೋಜು ಸೇರಿದಂತೆ ಹಲವು ವಿಚಾರಗಳಿಗೆ ಬ್ರೇಕ್​ ಹಾಕಿದೆ ಎಂದ ಸೂರ್ಯ
ನವದೆಹಲಿ: ಅಂದು ಮುಖಕ್ಕೆ ಹೊಡೆದಂತೆ ಪತ್ನಿ ಕೇಳಿದ ಆ ಒಂದು ಪ್ರಶ್ನೆಯಿಂದಲೇ ತನ್ನ ಕ್ರಿಕೆಟ್​ ಜೀವನ ಮಹತ್ವದ ತಿರುವು ಪಡೆದುಕೊಂಡಿತು ಎಂದು ಟಿ20 ವಿಶ್ವಕಪ್​ ವಿಜೇತ ತಂಡದ ನಾಯಕ ಸೂರ್ಯಕುಮಾರ್​ ಯಾದವ್ ( Suryakumar Yadav )​ ಅವರು ಬಹಿರಂಗಪಡಿಸಿದ್ದಾರೆ.
ಅಷ್ಟಕ್ಕೂ ಸೂರ್ಯಕುಮಾರ್​ ಪತ್ನಿ ದೇವಿಶಾ ಶೆಟ್ಟಿ ಕೇಳಿದ ಆ ಪ್ರಶ್ನೆ ಏನು? ಅದಕ್ಕೆ ಸೂರ್ಯಕುಮಾರ್​ ಕೊಟ್ಟ ಖಡಕ್​ ಉತ್ತರ ಏನಿತ್ತು? ಪತ್ನಿಯ ಮಾತುಗಳನ್ನೇ ಸೂರ್ಯಕುಮಾರ್​ ಪ್ರೇರಣೆಯಾಗಿ ತೆಗೆದುಕೊಂಡರಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲವಿದ್ದರೆ, ಈ ಲೇಖನವನ್ನು ಕೊನೆಯವರೆಗೂ ಓದಿ.
ಇತ್ತೀಚೆಗೆ ಪಿಟಿಐ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಸೂರ್ಯಕುಮಾರ್​ ಯಾದವ್​, ನಾನು ಮತ್ತು ದೇವಿಶಾ ಇಬ್ಬರು 2016ರಲ್ಲಿ ಮದುವೆಯಾದೆವು. ಆಗ ನಾನು ಕೋಲ್ಕತ ನೈಟ್​ ರೈಡರ್ಸ್​ ಪರ ಆಡುತ್ತಿದೆ. ಎಲ್ಲವೂ ಬಹಳ ಸೊಗಸಾಗಿಯೇ ಸಾಗುತ್ತಿತ್ತು. ನಾನು ಕೂಡ ಚೆನ್ನಾಗಿ ಆಡುತ್ತಿದ್ದೆ ಮತ್ತು ಅದನ್ನು ಎಂಜಾಯ್​ ಮಾಡುತ್ತಿದೆ. ಆದರೆ, 2018ರಲ್ಲಿ ನನ್ನ ಪತ್ನಿ, ಮುಖಕ್ಕೆ ಹೊಡೆದಂತೆ ಒಂದು ಪ್ರಶ್ನೆಯನ್ನು ಕೇಳಿದರು. ಅದೇನೆಂದರೆ, ನಿನ್ನ ವಯಸ್ಸಿನ ಅನೇಕ ಆಟಗಾರರು ಭಾರತಕ್ಕಾಗಿ ಆಡುತ್ತಿರುವಾಗ ನಿನ್ನ ಮನಸ್ಸಿನಲ್ಲಿ ಏನಿದೆ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಾನು ಕೂಡ ಭಾರತಕ್ಕಾಗಿ ಆಡಬೇಕು ಎಂದೆ ಎಂದು ಸೂರ್ಯಕುಮಾರ್​ ಹೇಳಿದರು. 
ಈ ಒಂದು ಪ್ರಶ್ನೆಯೇ ನನ್ನನ್ನು ನಾನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸಿತು ಎಂಬುದನ್ನು ಸೂರ್ಯಕುಮಾರ್​ ಇದೇ ಸಮಯದಲ್ಲಿ ಒಪ್ಪಿಕೊಂಡರು. ಆ ಸಮಯದಲ್ಲಿ ನಮ್ಮಿಬ್ಬರ ನಡುವೆ ನಡೆದಿದ್ದು ವಾದವಲ್ಲ, ಒಂದು ಹೆಜ್ಜೆಯನ್ನು ಹೇಗೆ ಮುಂದೆ ಇಡಬೇಕು ಎಂಬುದರ ಬಗ್ಗೆ ನಾವಿಬ್ಬರು ಸೇರಿ ಮಾಡಿದ ಚರ್ಚೆ ಅದಾಗಿತ್ತು. ನಾನು ಭಾರತಕ್ಕಾಗಿ ಆಡಬೇಕಾದರೆ ಮತ್ತು ಆಟದಲ್ಲಿ ಗೆಲುವು ಸಾಧಿಸಬೇಕಾದರೆ, ನಾನು ಅದನ್ನು ಹೇಗೆ ಮಾಡಲಿ? ಎಂದು ಚರ್ಚಿಸಿದೆವು ಎಂದು ಸೂರ್ಯಕುಮಾರ್​ ಯಾದವ್​ ಹೇಳಿದರು. 
ಇದಾದ ಬಳಿಕ ಶಿಸ್ತುಬದ್ಧ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಂಡೆ. ಆಹಾರ ಪದ್ಧತಿ, ಸ್ನೇಹಿತರ ಗುಂಪು, ವೀಕೆಂಡ್​ ಮೋಜು ಸೇರಿದಂತೆ ಹಲವು ವಿಚಾರಗಳನ್ನು ಹತೋಟಿಗೆ ತರಬೇಕಾಯಿತು. ಸೋಮವಾರದಿಂದ ಶುಕ್ರವಾರದವರೆಗೆ ನಾವು ಕಡ್ಡಾಯವಾಗಿ ಮಾಡುವ ಕೆಲಸದಂತೆಯೇ ನಮ್ಮ ಜೀವನಶೈಲಿಯನ್ನು ಪರಿಗಣಿಸಿದೆವು ಎಂದು ಸೂರ್ಯಕುಮಾರ್ ಯಾದವ್​ ಅವರು ವಿವರಿಸಿದರು.
ಈ ಬದಲಾವಣೆಗಳ ಫಲಿತಾಂಶ ತಕ್ಷಣವೇ ಸಿಕ್ಕಿತು. 2018ರ ಐಪಿಎಲ್​ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸೂರ್ಯ, 2019 ಮತ್ತು 2020ನೇ ಐಪಿಎಲ್​ ಆವೃತ್ತಿಯಲ್ಲೂ ಮುಂದುವರಿಸಿದರು. ಅಂತಿಮವಾಗಿ 2021ರಲ್ಲಿ ಟೀಮ್​ ಇಂಡಿಯಾ ಪರ ಸೂರ್ಯಕುಮಾರ್​ ಪದಾರ್ಪಣೆ ಮಾಡಿದರು. 
ಮೈದಾನದಿಂದಾಚೆಗೆ ತಮ್ಮ ಮನಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ರೂಪಿಸಿ, ನಿರಂತರವಾಗಿ ಬೆಂಬಲವಾಗಿ ನಿಂತ ಪತ್ನಿ ದೇವಿಶಾರನ್ನು ಸೂರ್ಯಕುಮಾರ್​ ಶ್ಲಾಘಿಸಿದರು. ನನ್ನ ಪತ್ನಿ ತೆರೆಮರೆಯಲ್ಲಿ ನನ್ನ ಮೇಲೆ ದೊಡ್ಡ ಪ್ರಭಾವ ಬೀರಿದ್ದಾರೆ. ಏನೇ ಹೇಳಬೇಕೆಂದರು ಅದನ್ನು ಪ್ರಾಮಾಣಿಕವಾಗಿ ಹೇಳುತ್ತಾರೆ. ಕೆಲವೊಮ್ಮೆ ಅವರ ಮಾತುಗಳು ಮುಖಕ್ಕೆ ಹೊಡದಂತೆ ಇರುತ್ತದೆ. ಆದರೆ, ಆ ಮಾತುಗಳು ನನಗೆ ಸಹಾಯ ಮಾಡುತ್ತದೆ. ಇಂದು ನಾನು ಈ ಸ್ಥಿತಿಯಲ್ಲಿದ್ದರೆ, ಅದಕ್ಕೆ ಕಾರಣ ಅಂದು ಅವರಾಡಿದ ಮಾತುಗಳು ಎಂದು ಸೂರ್ಯಕುಮಾರ್​ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net