ನನಗೆ ನಯನತಾರಾ... ಡಿಎಂಕೆ ಸರ್ಕಾರ ತೆಗಳುವ ಭರದಲ್ಲಿ ಶಾಕಿಂಗ್ ಹೇಳಿಕೆ ನೀಡಿದ AIADMK ನಾಯಕ! Nayanthara
ನನಗೆ ನಯನತಾರಾ... ಡಿಎಂಕೆ ಸರ್ಕಾರ ತೆಗಳುವ ಭರದಲ್ಲಿ ಶಾಕಿಂಗ್ ಹೇಳಿಕೆ ನೀಡಿದ AIADMK ನಾಯಕ! Nayanthara
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಏ.23ರಂದು ತಮಿಳುನಾಡು ವಿಧಾನಸಭೆ ಚುನಾವಣೆಗೆ ಭರದಿಂದ ಸಿದ್ಧತೆ
ನಯನತಾರಾ ಜೊತೆ ಮದುವೆ ಮಾಡಿಕೊಳ್ಳುವುದು ಕನಸು ಮಾಡಿಸುತ್ತಾರೆಯೇ?
ಸ್ಟಾಲಿನ್ ಸರ್ಕಾರವನ್ನು ತೆಗಳುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟ ಸ್ಟಾಲಿನ್
ಚೆನ್ನೈ: `ಸ್ಟಾಲಿನ್ ಅವರು ಕನಸು ಕಾಣಿ ಅದನ್ನು ನಮಗೆ ಹೇಳಿ ಅಂತಾರೆ. ನಟಿ ನಯನತಾರಾರನ್ನು ( Nayanthara ) ಮದುವೆಯಾಗಲು ಬಯಸಿದರೇ ಸರ್ಕಾರ ಅದನ್ನು ನನಸಾಗಿಸುತ್ತದೆಯೇ' ಹೀಗೆಂದು ಎಐಎಡಿಎಂಕೆ ನಾಯಕ ಮತ್ತು ರಾಜ್ಯಸಭಾ ಸಂಸದ ಸಿ.ವಿ. ಷಣ್ಮುಗಂ ವಿವಾದಾತ್ಮಕ ಹೇಳಿಕೆ ಕೊಟ್ಟಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆ ಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಡಿಎಂಕೆ ಸರ್ಕಾರ ನಿಮ್ಮ ಕನಸ್ಸನ್ನು ನಮಗೆ ತಿಳಿಸಿ ಎಂಬ ಅಭಿಯಾನವನ್ನು ಆರಂಭಿಸಿದೆ. ಇದರ ಜೊತೆಗೆ ಸಿಎಂ ಸ್ಟಾಲಿನ್ ಅವರನ್ನು ನಿಂದಿಸಲು ಹೋಗಿ ಎಐಎಡಿಎಂಕೆ ನಾಯಕ ಮತ್ತು ರಾಜ್ಯಸಭಾ ಸಂಸದ ಸಿ.ವಿ. ಷಣ್ಮುಗಂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಮಿಳುನಾಡಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಮತ್ತು ಘನತೆ ಕೋರಿ ವಿಲ್ಲಂಪುರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಲಾಗಿದೆ. ಅವರ ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ದೂರು ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ.
ನಯನತಾರಾ ಜೊತೆ ಮದುವೆ ಮಾಡ್ತಾರಾ?
ಕನಸು ಕಾಣಿರಿ ಎನ್ನುವ ಎಪಿಜೆ ಅಬ್ದುಲ್ ಕಲಾಂರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಅಬ್ದುಲ್ ಕಲಾಂ ಅವರು ನಮಗೆ ಕನಸು ಕಾಣಲು ಹೇಳಿದರು. ಎಂಕೆ ಸ್ಟಾಲಿನ್ ಅವರು ಕನಸ್ಸುಗಳನ್ನು ಹಂಚಿಕೊಳ್ಳೋಕೆ ಹೇಳಿದರು. ನಾನು ನಯನತಾರಾ ಅವರನ್ನು ಬಯಸುತ್ತೇನೆ. ಸ್ಟಾಲಿನ್ ಅವರು ನನ್ನ ಮದುವೆಯನ್ನು ನಯನತಾರಾರೊಂದಿಗೆ ಏರ್ಪಡಿಸಿ ನನ್ನ ಕನಸ್ಸನ್ನು ನನಸಾಗಿಸುತ್ತಾರೆಯೇ ಎಂದು ಕೇಳಿದರು. ಅವರ ಈ ಹೇಳಿಕೆಯನ್ನು ವೇದಿಕೆಯ ಮೇಲೆಯೇ ತಡೆಯದೆ ಎಐಎಡಿಎಂಕೆಯ ಸದಸ್ಯರು ನಗಾಡುತ್ತಿದ್ದರು.
ಮಹಿಳೆಯರ ರಕ್ಷಣೆ ಮತ್ತು ಅವರ ಗೌರವಕ್ಕಾಗಿ ಹೋರಾಟ ಎಂದು ಹೇಳ್ತಿದ್ದಾರೆ. ಆದರೆ, ಅವರಿಗೆ ಮಹಿಳೆಯರ ಮೇಲೆ ಎಷ್ಟು ಕೊಳಕು ಮನೋಭಾವ ಇದೆ ಅನ್ನೋದು ಅವರ ಮಾತಿನಲ್ಲೇ ತಿಳಿದು ಬರುತ್ತಿದೆ ಎಂದು ಗಿರಿಧರ್ ಕೆ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಮಹಿಳೆಯರ ವಿರುದ್ಧ ಟೀಕೆ ಮಾಡ್ಬೇಡಿ
ನಮ್ಮ ಯೋಜನೆಗಳನ್ನು ಟೀಕೆ ಮಾಡಿ ತಪ್ಪಿಲ್ಲ. ಆದರೆ, ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಬೇಡಿ. ನಯನತಾರಾರನ್ನು ಟೀಕೆ ಮಾಡುವ ಮೂಲಕ ಎಲ್ಲ ಮಹಿಳೆಯರನ್ನು ಪರೋಕ್ಷವಾಗಿ ಅವಮಾನಿಸಿದ್ದಾರೆ. ನಾಗರಿಕ ಸಮಾಜದಲ್ಲಿ ಇದು ಸ್ವೀಕಾರಾರ್ಹವಲ್ಲ ಎಂದು ಡಿಎಂಕೆ ವಕ್ತಾರ ಸೈಯದ್ ಹಫೀಜುಲ್ಲಾ ಹೇಳಿದರು, (ಏಜೆನ್ಸೀಸ್).